ಶಿಕಾರಿಪುರ ಲೈವ್:
ಕರ್ನಾಟಕ ರಾಜ್ಯ ವಕೀಲರ ಪರಿಷತ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಸದಾಶಿವ ರೆಡ್ಡಿ ಅವರ ಮೇಲೆ ಮಾರಣಾಂತಿಕ ಹಲ್ಲೆ ಖಂಡಿಸಿ ಹಾಗೂ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ತಾಲೂಕು ಕಚೇರಿ ಮುಂಭಾಗ ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ಪ್ರತಿಭಟನೆ ನಡೆಸಿ ಶಿರಸ್ತೇದಾರ್ ವಿನಯ್ ಎಂ. ಆರಾಧ್ಯ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಕೀಲರು, ಹಿರಿಯ ವಕೀಲರಾದ ಸದಾಶಿವ ರೆಡ್ಡಿ ಅವರ ಮೇಲೆ ಏ. 16ರಂದು ಅಪರಿಚಿತರು ನಡೆಸಿದ ಹಲ್ಲೆಯನ್ನು ವಕೀಲರ ಸಂಘ ತೀವ್ರವಾಗಿ ಖಂಡಿಸುತ್ತದೆ. ಪದೇ ಪದೇ ವಕೀಲರ ಮೇಲೆ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ವಕೀಲರ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ವಕೀಲರ ರಕ್ಷಣೆಗಾಗಿ ವಕೀಲರ ರಕ್ಷಣೆ ಕಾಯ್ದೆಯನ್ನು ತಿದ್ದು ಪಡಿ ಮಾಡಲು ಮುಂದಾಗಬೇಕು. ಹಲ್ಲೆ ನಡೆಸಿದ ಆರೋಪಿಗಳನ್ನು ಪತ್ತೆ ಹಚ್ಚಬೇಕು. ಹಲ್ಲೆ ಮಾಡಿದವರ ಹಿಂದೆ ಇರವ ವ್ಯಕ್ತಿಗಳು ಯಾರು ಎಂಬುದನ್ನು ಪತ್ತೆ ಹಚ್ಚಬೇಕು.ಈ ಹಲ್ಲೆ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಕೀಲರ ಸಂಘದ ಉಪಾಧ್ಯಕ್ಷ ಸಿ. ಮಾಲತೇಶ್, ಕಾರ್ಯದರ್ಶಿ ಎಚ್.ಪಿ. ಪ್ರಕಾಶ್, ಹಿರಿಯ ವಕೀಲರಾದ ವೇದಮೂರ್ತಿ, ಉಮೇಶಗೌಡ, ಕೆ.ಜಿ. ರುದ್ರಪಯ್ಯ, ನಿರ್ದೇಶಕರಾದ ಶ್ರೀಧರ್, ಲೋಕ್ಯಾನಾಯ್ಕ, ವಕೀಲರಾದ ವಿನಯ್ ಬಾಬು, ಯಾದವಮೂರ್ತಿ, ರಮೇಶ್ ಮಾಳಗಿ, ರಾಜುನಾಯ್ಕ, ರವಿಕುಮಾರ್, ಮಾಲತೇಶ್, ತನ್ವೀರ್, ಟಿ.ಎಂ. ಪ್ರಕಾಶ್, ಯೋಗೀಶ್, ಬಸವರಾಜ್, ರಜನಿ, ಅನುಪಮಾ, ಸೀಮಾ, ಅರ್ಚಿತಾ, ಸ್ವಾತಿ, ಸುಜಾತ ಮತ್ತಿತರರು ಉಪಸ್ಥಿತರಿದ್ದರು.
Leave a comment