ಶಿಕಾರಿಪುರ ಲೈವ್:
ಐತಿಹಾಸಿಕ ಹಿನ್ನೆಲೆ ಹೊಂದಿರುವ ಪಟ್ಟಣದ ಹುಚ್ಚರಾಯಸ್ವಾಮಿ(ಆಂಜನೇಯ) ದೇವಸ್ಥಾನದ ಬ್ರಹ್ಮ ರಥೋತ್ಸವ(ಜಾತ್ರಾ ಮಹೋತ್ಸವ) ಕಾರ್ಯಕ್ರಮ ಏ.12ರಂದು(ಶನಿವಾರ) ನಡೆಯಲಿದೆ.
ಹುಚ್ಚರಾಯಸ್ವಾಮಿ ದೇವರ ಬ್ರಹ್ಮರಥೋತ್ಸವ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಜಾತ್ರಾ ಮಹೋತ್ಸವ ಪ್ರಯುಕ್ತ ಏ.7ರಂದು(ಸೋಮವಾರ) ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ಕಂಕಣಧಾರಣೆ ಕಾರ್ಯಕ್ರಮ ನಡೆಯಿತು.
ಕಂಕಣಧಾರಣೆ ಕಾರ್ಯಕ್ರಮದಲ್ಲಿ ಸಂಸದರಾದ ಬಿ.ವೈ. ರಾಘವೇಂದ್ರ ಪಾಲ್ಗೊಂಡಿದ್ದರು. ಏ.10ರಂದು ಚಕ್ರ ರಥೋತ್ಸವ ಹಾಗೂ ಏ.11ರಂದು ಪುಷ್ಪ ರಥೋತ್ಸವ ನಡೆಯಲಿದೆ. ಏ.12ರಂದು(ಶನಿವಾರ) ಬೆಳಿಗ್ಗೆ 8.20ರಿಂದ8.30ರವರೆಗಿನ ವೃಷಭ ಲಗ್ನದ ಶುಭ ಸಂದರ್ಭದಲ್ಲಿ ಹುಚ್ಚರಾಯಸ್ವಾಮಿ ದೇವಸ್ಥಾನ ಅವರಣದಿಂದ ಬ್ರಹ್ಮ ರಥೋತ್ಸವಕ್ಕೆ ಚಾಲನೆ ದೊರೆಯಲಿದೆ. ಬ್ರಹ್ಮರಥೋತ್ಸವ ಪ್ರಯುಕ್ತ ಭಕ್ತರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಏ.13ರಂದು ಸಂಜೆ ಹುಚ್ಚರಾಯ ಸ್ವಾಮಿ ಕೆರೆಯಲ್ಲಿ ಸಿಡಿ ಮದ್ದುಗಳೊಂದಿಗೆ ಹುಚ್ಚರಾಯಸ್ವಾಮಿ ದೇವರ ತೆಪ್ಪೋತ್ಸವ ಕಾರ್ಯಕ್ರಮ ಜರುಗಲಿದೆ.
Leave a comment