ಶಿಕಾರಿಪುರ ಲೈವ್:
ಪತ್ರಕರ್ತ ಸಾಮಾಜಿಕ ನ್ಯಾಯ ಹಾಗೂ ಸಂವಿಧಾನ ಪರವಾಗಿರಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ನಿರ್ದೇಶಕ ಎನ್. ರವಿ ಕುಮಾರ್ ಸಲಹೆ ನೀಡಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಶುಕ್ರವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪರ್ತಕರ್ತರು ಬಡವರ,ಸಮಾನತೆಯ,ದಮನೀತರ ಹಾಗೂ ಸಾಮಾಜಿಕ ನ್ಯಾಯದ ಪರ ನಿಲ್ಲಬೇಕು. ಆರೋಗ್ಯ ಪೂರ್ಣ ಸಮಾಜ ಕಟ್ಟಲು ಮುಂದಾಗಬೇಕು. ವಾಟ್ಸ್ ಅ್ಯಪ್ ಯುನಿವರ್ಷಿಟಿಯಿಂದ ಸುಳ್ಳು ಬಿತ್ತುವ ಕಾರ್ಯ ಆಗುತ್ತಿದೆ. ಪತ್ರಕರ್ತರು ವಾಟ್ಸಾಅ್ಯಪ್ ಯುನಿವರ್ಸಿಟಿಯನ್ನು ಅವಲಂಭಿಸಬಾರು.
ಪತ್ರಕರ್ತರು ಸತ್ಯವನ್ನು ಬರೆಯಬೇಕು. ಪತ್ರಿಕೋದ್ಯಮ ಘನತೆ ಉಳಿಯಲು ನ್ಯಾಯ ನೀತಿ ಹಾಗೂ ಸಂವಿಧಾನ ಆಶಯಕ್ಕೆ ತಕ್ಕಂತೆ ಬರೆಯಬೇಕು ಎಂದು ಕಿವಿಮಾತು ಹೇಳಿದರು.
ಪತ್ರಿಕಾ ಮಾಧ್ಯಮ ಒಂದು ಕ್ಷೇತ್ರವಾಗಿ ಉಳಿದಿಲ್ಲ, ಉದ್ಯಮವಾಗಿ ಮಾರ್ಪಟ್ಟಿದೆ. ಸಮಾಜ ಸೇವೆ ಮರೆತು ಲಾಭ ನಷ್ಟದಲ್ಲಿ ಮುಳುಗಿದೆ. ಉದ್ಯಮಿಗಳ ಕೈಯಲ್ಲಿ ಹಾಗೂ ಧರ್ಮದ ಕೈಯಲ್ಲಿ ಪತ್ರಿಕೋದ್ಯಮ ಸಿಕ್ಕಿಕೊಂಡಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು,
ಪತ್ರಿಕೋದ್ಯಮ ಕ್ಷೇತ್ರ ಉಳಿಸಲು ಪತ್ರಿಕೆಗಳನ್ನು ಕೊಂಡು ಓದುವ ಸಂಸ್ಕೃತಿಯನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ಪತ್ರಿಕೆ ಓದು ಜ್ಞಾನವನ್ನು ವಿಸ್ತರಿಸುತ್ತದೆ ಎಂದು ಸಲಹೆ ನೀಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ.ಎಸ್. ಹುಚ್ಚರಾಯಪ್ಪ ಮಾತನಾಡಿ, ಹದಿಹರೆಯದ ವಯಸ್ಸಿನ ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ತೀರ್ಮಾನಗಳನ್ನು ಕೈಗೊಳ್ಳುವಾಗ ತಮ್ಮ ತಂದೆ ತಾಯಿ ಮತ್ತು ಅವರ ಶ್ರಮವನ್ನು ನೆನಪಿನಲ್ಲಿಟ್ಟುಕೊಂಡು ತಮ್ಮ ಬದುಕಿನ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು. ಇಂದಿನ ಸಾಮಾಜಿಕ ಜಾಲತಾಣದ ಮೋಹದಿಂದಾಗಿ ಯುವ ಜನತೆ ದಾರಿ ತಪ್ಪುತ್ತಿದ್ದು,ತುಂಬಾ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಲ್. ರಾಜು ಮಾತನಾಡಿ, ತಾಲೂಕು ಸಂಘವು ಜಿಲ್ಲೆಯಲ್ಲಿ ಉತ್ತಮ ಸಂಘವಾಗಿದ್ದು, ಜಿಲ್ಲಾ ಸಂಘದ ಮಾರ್ಗದರ್ಶನ , ತಾಲೂಕು ಸಂಘದ ಸದಸ್ಯರುಗಳ ಸಹಕಾರದಿಂದಾಗಿ ಕಳೆದ ಹತ್ತು ವರ್ಷಗಳಿಂದ ಸಂಘವು ಉತ್ತಮವಾಗಿ ಕಾರ್ಯ ಚಟುವಟಿಕೆ ನಡೆಸುತ್ತಿದೆ. ಸಂಘದ ಬೆಳವಣಿಗೆಗೆ ಸಹಕರಿಸಿದ ಸಂಘದ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಜಿಲ್ಲಾ ಕಾರ್ಯನಿರತ ಪರ್ತಕರ್ತರ ಸಂಘದ ಉಪಾಧ್ಯಕ್ಷ ಕೆ.ಎಸ್. ಹುಚ್ರಾಯಪ್ಪ, ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್, ಕಾರ್ಯದರ್ಶಿ ಸೋಮನಾಥ್, ಖಜಾಂಚಿ
ರಂಜಿತ್, ನಿರ್ದೇಶಕ ರೋಹಿತ್, ಪ್ರೆಸ್ ಟ್ರಸ್ಟ್ ಅಧ್ಯಕ್ಷ ವೈಭವ್ ಬಸವರಾಜ್, ಹಿರಿಯ ಪರ್ತಕರ್ತರಾದ ಎಸ್.ಬಿ. ಮಠದ್, ಬಿ.ಸಿ. ವೇಣುಗೋಪಾಲ್, ತಾಲ್ಲೂಕು ಉಪಾಧ್ಯಕ್ಷರಾದ ಕೋಟೇಶ್ವರ್, ಎಂ. ನವೀನ್ ಕುಮಾರ್, ಪತ್ರಕರ್ತರಾದ ಚಂದ್ರಶೇಖರ ಮಠದ, ಬಾಲಕೃಷ್ಣ ಜೋಯಿಸ್, ಎಸ್.ಬಿ ಅರುಣ್ ಕುಮಾರ್, ಬಿ.ವಿ. ಶೇಷಗಿರಿ , ಎಚ್ ಎಸ್ ರಘು , ರಾಜಾರಾವ್ ಜಾದವ್, ಕಾಳಿಂಗರಾವ್, ಎಚ್. ಕೆ. ಪ್ರಕಾಶ್ , ಸತೀಶ್, ಅರುಣ್ ಕುಮಾರ್, ಮಂಜುನಾಥ್ ಮಠದ್, ಮಂಜಪ್ಪ ಬಗನಕಟ್ಟೆ, ಹೆಬ್ಬಾರ್, ಐ ಎಫ್ ಮಳಗಿ, ರಘು ನಿರ್ಮಿತ್ ಮತ್ತಿತರರು ಉಪಸ್ಥಿತರಿದ್ದರು.
Leave a comment