Home ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ: ಪುರಸಭೆ ಉಪಾಧ್ಯಕ್ಷೆ ರೂಪಾ ಮಂಜುನಾಥ್
Home

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ: ಪುರಸಭೆ ಉಪಾಧ್ಯಕ್ಷೆ ರೂಪಾ ಮಂಜುನಾಥ್

Share
Share

ಶಿಕಾರಿಪುರ ಲೈವ್:
ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರೀಕರ ಜವಾಬ್ದಾರಿಯಾಗಿದೆ ಎಂದು ಪುರಸಭೆ ಉಪಾಧ್ಯಕ್ಷೆ ರೂಪಾ ಮಂಜುನಾಥ್ ಪಾರಿವಾಳ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕೇಂದ್ರ ಸರ್ಕಾರದ ಪುರಸ್ಕೃತ ಅಮೃತಮಿತ್ರ ಯೋಜನೆ ಅಡಿ”ಮಾತೆಗೊಂದು ಮರ”
ಕಾರ್ಯಕ್ರಮದ ಕುರಿತು ಸ್ವಸಹಾಯ ಸಂಘದ ಮಹಿಳೆಯರಿಗೆ ಆಯೋಜಿಸಿದ್ದ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಆರೋಗ್ಯಕರ ಜೀವನಕ್ಕೆ ಉತ್ತಮ ಪರಿಸರ ಮುಖ್ಯವಾಗುತ್ತದೆ. ಮುಂದಿನ ಪೀಳಿಗೆಗಾಗಿ ಪರಿಸರ ಸಂರಕ್ಷಣೆ ಮಾಡುವುದು ನಮ್ಮೇಲ್ಲರ ಕರ್ತವ್ಯವಾಗಿದೆ.
ಪರಿಸರ ಸಂರಕ್ಷಣೆಗಾಗಿ ಪಟ್ಟಣ ವ್ಯಾಪ್ತಿಯ ಸರ್ಕಾರಿ ಸ್ವಾಮ್ಯದ ಖಾಲಿ ಜಾಗಗಳಲ್ಲಿ ಸ್ಮಶಾನ,ಉದ್ಯಾನವನ, ಶಾಲಾ ಕಾಲೇಜುಗಳ ಮೈದಾನ, ಘನ ತ್ಯಾಜ್ಯ ವಿಲೇವಾರಿ ಘಟಕದ ಸ್ಥಳ,ಜಲಶುದ್ಧೀಕರಣ ಘಟಕ ಸೇರಿದಂತೆ ಪಟ್ಟಣದ ವಿವಿಧ ಸ್ಥಳಗಳಲ್ಲಿ ಪರಿಸರ ದಿನಾಚರಣೆ ದಿನದಂದು ಸುಮಾರು 2000 ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಕಾರ್ಯಕ್ರಮ ಯಶಸ್ವಿಗೊಳಿಸಲು ಸ್ವಸಹಾಯ ಸಂಘದ ಮಹಿಳೆಯರ ಜೊತೆ ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಸಂಪನ್ಮೂಲ ವ್ಯಕ್ತಿಗಳಾದ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆಯ ಸಮನ್ವಯ ಕಾಶಿ ಮತ್ತು ಡಾ. ದೇವೇಂದ್ರ ನಾಯಕ್ ಮಾತನಾಡಿದರು.

ಪುರಸಭೆ ಸ್ಥಾಯಿ ಸಾಯಿ ಸಮಿತಿ ಅಧ್ಯಕ್ಷ ರಮೇಶ್, ಪುರಸಭಾ ಸದಸ್ಯರಾದ ರೂಪಕಲಾ ಹೆಗಡೆ, ರೇಣುಕಸ್ವಾಮಿ, ಮುಖ್ಯಾಧಿಕಾರಿ ಭರತ್, ಸಮುದಾಯ ಸಂಘಟನಾಧಿಕಾರಿ ಸುರೇಶ್, ವ್ಯವಸ್ಥಾಪಕ ರಾಜಕುಮಾರ್, ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಗೀತಾ,ಪ್ರಿಯಾಂಕ,ಯಶೋಧ ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Home

ಸಂವಿಧಾನ ಆಶಯಕ್ಕೆ ದಕ್ಕೆಯಾಗದಂತೆ ಜೀವನ ನಡೆಸಿ: ತಹಶೀಲ್ದಾರ್ ಮಲ್ಲೇಶ್ .ಬಿ. ಪೂಜಾರ್ ಸಲಹೆ

ಶಿಕಾರಿಪುರ ಲೈವ್: ಸಂವಿಧಾನದ ಆಶಯಕ್ಕೆ ದಕ್ಕೆಯಾಗದಂತೆ ನಾವು ಜೀವನ ನಡೆಸಬೇಕು ಎಂದು ತಹಶೀಲ್ದಾರ್ ಮಲ್ಲೇಶ್ ಬಿ.ಪೂಜಾರ್...

Home

ರೈತರ ಸಂಕಷ್ಟಕೆ ಅಧಿಕಾರಿಗಳು ಸ್ಪಂದಿಸಬೇಕು: ಶಾಸಕ ಬಿ.ವೈ. ವಿಜಯೇಂದ್ರ ಸೂಚನೆ

ಶಿಕಾರಿಪುರ ಲೈವ್: ರೈತರ ಕಷ್ಟಕ್ಕೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಶಾಸಕ‌ ಬಿ.ವೈ. ವಿಜಯೇಂದ್ರ ಸೂಚಿಸಿದರು. ಪಟ್ಟಣದ...

Home

ನಿರಂತರ ಮಳೆ ನಾಳೆ(ಶನಿವಾರ) ಶಿಕಾರಿಪುರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಶಿಕಾರಿಪುರ ಲೈವ್: ತಾಲೂಕಿನಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆ ದಿನಾಂಕ 26/7/2025(ಶನಿವಾರ) ಶಿಕಾರಿಪುರ ತಾಲ್ಲೂಕಿನ ಎಲ್ಲಾ...

Home

ನಿರಂತರ ಮಳೆ ಶಿಕಾರಿಪುರ ತಾಲೂಕಿನ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಣೆ

ಶಿಕಾರಿಪುರ ಲೈವ್: ತಾಲೂಕಿನಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಇಂದು ದಿನಾಂಕ 25/7/2025(ಶುಕ್ರವಾರ) ಶಿಕಾರಿಪುರ ತಾಲ್ಲೂಕಿನ ಎಲ್ಲಾ...