ಶಿಕಾರಿಪುರ ಲೈವ್:
ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಕೃಷಿ ಕ್ಷೇತ್ರದಲ್ಲಿ ರೈತರು ಸಾಧನೆ ಮಾಡಬೇಕು ಎಂದು ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷರಾದ ನಗರದ ಮಹದೇವಪ್ಪ ಸಲಹೆ ನೀಡಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಕೃಷಿಕ ಸಮಾಜದ ಭವನದಲ್ಲಿ ತಾಲೂಕು ಕೃಷಿಕ ಸಮಾಜ ತಮಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ರೈತರು ದೇಶದ ಬೆನ್ನೆಲುಬು ಆಗಿದ್ದಾರೆ. ರೈತರು ವೈಜ್ಞಾನಿಕ ಕೃಷಿ ಪದ್ದತಿ ಅಳವಡಿಸಿಕೊಳ್ಳಬೇಕು. ಕೃಷಿಕ ಸಮಾಜದ ಅಧ್ಯಕ್ಷನಾಗಿ ಸರ್ಕಾರದ ಸೌಲಭ್ಯಗಳನ್ನು ಸಮಾಜದ ಕಟ್ಟ ಕಡೆಯ ರೈತನಿಗೂ ತಲುಪಿಸುವ ವ್ಯವಸ್ಥೆಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ.
ನನ್ನ ಸೇವೆಯನ್ನು ಗುರುತಿಸಿ ನನ್ನನ್ನು ರಾಜ್ಯದ ಕೃಷಿಕ ಸಮಾಜದ ಅಧ್ಯಕ್ಷನಾಗಿ ಆಯ್ಕೆ ಮಾಡಿದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೂ, ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರಿಗೂ ಕೃಷಿ ಸಚಿವರಾದ ಚೆಲುವ ರಾಯ ಸ್ವಾಮಿಯವರಿಗೂ ಆಭಾರಿಯಾಗಿದ್ದೇನೆ ಎಂದರು.
ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಹುಲ್ಮಾ ರ್ ಮಹೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕೆಪಿಸಿಸಿ ಸದಸ್ಯ ಗೋಣಿಮಾಲತೇಶ್, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎಸ್ ಪಿ ನಾಗರಾಜ ಗೌಡ, ಮುಖಂಡ ಎನ್.ವಿ. ಈರೇಶ್, ಕೃಷಿ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಕಿರಣ್ ಕುಮಾರ್ ಹರ್ತಿ, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ನಾಗರಾಜಪ್ಪ, ತಾಲೂಕು ಉಪಾಧ್ಯಕ್ಷ ಮುನಿಯಪ್ಪ, ಪ್ರಧಾನ ಕಾರ್ಯದರ್ಶಿ ಕವಲಿ ರಾಮನಗೌಡ, ನಿರ್ದೇಶಕರಾದ ಡಿ.ಎಸ್. ಈಶ್ವರಪ್ಪ, ಬಿ.ಸಿ. ವೇಣುಗೋಪಾಲ್, ಡಿ.ಡಿ. ಶಿವಕುಮಾರ್, ಮುಗುಳಗೆರೆ ಬೂದೆಪ್ಪ, ಕೆಂಪಳ್ಳಿ ಗಂಗಾಧರಪ್ಪ , ಕೆ.ಪಿ.ರುದ್ರಪ್ಪ, ಶಿರಾಳಕೊಪ್ಪ ಚನ್ನವೀರಶೆಟ್ರು, ದುರ್ಗಾವ್ವರ ಶಿವಣ್ಣ, ಗಿರೀಶ್, ಬಸವರಾಜ್ ಪಾಟೀಲ್, ಮಲ್ಲೇಶಪ್ಪ ಅಂಬಾರಗೊಪ್ಪದ ರಾಜಪ್ಪ, ಕಿರಣ್ ಕಾಂತ್, ಪುರಸಭೆ ಸದಸ್ಯ ನಗರದ ರವಿಕಿರಣ್, ಅಹಿಂದ ಅಧ್ಯಕ್ಷ ನಗರದ ಮಾಲತೇಶ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ಜಾಥ ಹಾಗೂ ತೆರೆದ ವಾಹನದ ಮೂಲಕ ನಗರದ ಮಹಾದೇವಪ್ಪ ಅವರ ಮೆರವಣಿಗೆ ನಡೆಸಿದರು.
Leave a comment