ಶಿಕಾರಿಪುರ ಲೈವ್:
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಗ್ರಾಮದಲ್ಲಿ ನಡೆದ ಮೈಲಾರಲಿಂಗೇಶ್ವರ ದೇವರ ಕಾರ್ಣಿಕೋತ್ಸವ ಪ್ರಯುಕ್ತ ಮೈಲಾರಲಿಂಗೇಶ್ವರ ದೇವರ ಭಕ್ತರು ಹಾಗೂ ಗೊರವಯ್ಯನವರು ಸಂಪ್ರದಾಯದಂತೆ ಪಟ್ಟಣದ ಮಾಸೂರು ರಸ್ತೆಯಲ್ಲಿರುವ ಶಿಭಾರ ಕಟ್ಟೆಯಲ್ಲಿ ಬುಧವಾರ ಧಾರ್ಮಿಕ ಕಾರ್ಯಕ್ರಮ ಗಟ್‌ಪರವು ನಡೆಸಿದರು.
ಸಂಜೆ ಗೊರವಯ್ಯನವರು ಹಾಗೂ ದೇವರು ಹೊತ್ತ ಮಹಿಳೆಯರ ನೇತೃತ್ವದಲ್ಲಿ ಈ ಧಾರ್ಮಿಕ ಕಾರ್ಯಕ್ರಮ ನಡೆದವು. ಮಹಿಳೆಯರು ಮಕ್ಕಳು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಭಕ್ತರು ಶಿಭಾರಕಟ್ಟೆ ಬಳಿ ಜಮಾಯಿಸಿ, ತಮ್ಮ ಮನೆಯಿಂದ ತಯಾರಿಸಿಕೊಂಡು ಬಂದಿದ್ದ ತಿನಿಸುಗಳಿಂದ ನೈವೆದ್ಯ ತಯಾರಿಸಿ ಮೈಲಾರಲಿಂಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಅರ್ಪಿಸಿದರು. ವಿಶೇಷ ಪೂಜೆ ಹಿನ್ನೆಲೆ ಶಿಭಾರಕಟ್ಟೆಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು.
ಗೊರವಯ್ಯನವರು ಬಾಳೆಹಣ್ಣು ಸಕ್ಕರೆ ತುಪ್ಪ ಹಾಲು ಬೆರೆಸಿ,ಹಣ್ಣು ತುಪ್ಪದ ನೈವೆದ್ಯ ಮಾಡಿ ಭಕ್ತರಿಗೆ ವಿತರಿಸಿದರು. ಈ ಸಂದರ್ಭದಲ್ಲಿ ನೆರೆದಿದ್ದ ಭಕ್ತರು ಮೈಲಾರಲಿಂಗೇಶ್ವರ ದೇವರಿಗೆ ಏಳುಕೋಟಿ ಏಳುಕೋಟಿ–ಚಾಂಗ್ ಬಲೋ ಎಂದು ಭಕ್ತಿಯಿಂದ ಜಯಘೋಷವನ್ನು ಹಾಕುತ್ತಿದ್ದರು. ಶಿಭಾರದಲ್ಲಿ ಧಾರ್ಮಿಕ ಕಾರ್ಯ ಗಟ್ ಪರವು ಮುಗಿದ ನಂತರ ಶಿಬಾರಕಟ್ಟೆಯಿಂದ ಗಿಡ್ಡಯ್ಯ ದೇವಸ್ಥಾನದವರೆಗೂ ಮೆರವಣಿಗೆ ಹೊರಟ ಗೊರವಯ್ಯನವರು,ಈ ಸಂದರ್ಭದಲ್ಲಿ ಭಕ್ತರು ತಮ್ಮ ಮನೆ ಮುಂದೆ ನೀಡುವ ಬಾಳೆಹಣ್ಣು ಸಕ್ಕರೆ ತುಪ್ಪ ಹಾಲು ತೆಗೆದುಕೊಂಡು ಹಣ್ಣು ತುಪ್ಪದ ನೈವೆದ್ಯ ಮಾಡಿ ಭಕ್ತರಿಗೆ ವಿತರಿಸಿದರು. ನಂತರ ಗಿಡ್ಡೆಶ್ವರ ದೇವಸ್ಥಾನದಲ್ಲಿ ಗೊರವಯ್ಯನವರು ವಿಶೇಷ ಪೂಜೆ ಸಲ್ಲಿಸಿದರು.
Leave a comment