ಶಿಕಾರಿಪುರ ಲೈವ್: ವಿಜ್ಞಾನ ಎಷ್ಟೇ ಮುಂದುವರಿದರೂ ಸನಾತನ ಸಂಸ್ಕೃತಿಯನ್ನು ಮರೆಯಲು ಸಾಧ್ಯವಿಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಪಟ್ಟಣದ ಶಿವಗಿರಿ ಮಠದ ಆವರಣದಲ್ಲಿ ಮಾರಿಕಾಂಬಾದೇವಿ ಜಾತ್ರಾ ಮಹೋತ್ಸವ ಪ್ರಯುಕ್ತ ಜಾತ್ರಾ ಮಹೋತ್ಸವ ಸಮಿತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿ ಆಯೋಜಿಸಿದ್ದ ಗೀತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಆವರು ಮಾತನಾಡಿದರು.
ಪ್ರಾಚೀನ ಕಾಲದಿಂದಲೂ ನಾವು ಧಾರ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದೇವೆ. ಆಧುನಿಕ ಜಗತ್ತಿನಲ್ಲಿ ನಾವು ಜೀವನ ನಡೆಸಿದರೂ ಕೂಡ ದೇವಸ್ಥಾನಕ್ಕೆ ಹೋಗುವ ಸಂಪ್ರದಾಯವನ್ನು ನಾವು ಎಂದಿಗೂ ಬಿಡಲು ಸಾಧ್ಯವಿಲ್ಲ. ಈ ಧಾರ್ಮಿಕ ಪರಂಪರೆಯನ್ನು ಯುವ ಸಮುದಾಯ ಉಳಿಸಿ ಬೆಳೆಸಬೇಕು. ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವವನ್ನು ಆಕರ್ಷಣಿಯ ರೀತಿಯಲ್ಲಿ ಆಯೋಜಿಸಿದ ದೇವಸ್ಥಾನ ಸಮಿತಿ ಹಾಗೂ ಜಾತ್ರಾ ಮಹೋತ್ಸವ ಸಮಿತಿ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮಾರಿಕಾಂದೇವಿ ಎಲ್ಲರಿಗೂ ಒಳಿತನ್ನು ಮಾಡಲಿ ಎಂದರು.
ಮಾರಿಕಾಂಬಾದೇವಿ ಜಾತ್ರಾ ಮಹೋತ್ಸವ ಸಮಿತಿ ಹಾಗೂ ದೇವಸ್ಥಾನ ಸಮಿತಿ ಅಧ್ಯಕ್ಷ ಗೋಣಿ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು
ಇದೇ ಸಂದರ್ಭದಲ್ಲಿ ಗಾಯಕರಾದ ನವೀನ್ ಸಜ್ಜು,ಖಾಸೀಂಆಲಿ,ಮಾನ್ಯ ಹಾಗೂ ಸಂಗಡಿಗರು ಗೀತ ಗಾಯನ ಕಾರ್ಯಕ್ರಮ ನಡೆಸಿ ಕೊಟ್ಟರು.

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್, ಅಖಿಲ ಭಾರತ ವೀರಶೈವ ಮಹಾಸಭಾ ಮಾರಿಕಾಂಬಾ ದೇವಸ್ಥಾನ ಸಮಿತಿ ಪ್ರಧಾನ ಕಾರ್ಯದರ್ಶಿ ಹೊಲಗಾವಲು ಚಿಕ್ಕಣ್ಣ, ಖಜಾಂಚಿ ಶಿವಶಂಕರಪ್ಪ ಪಾರಿವಾಳ, ಸದಸ್ಯರಾದ ಕೆ. ಹಾಲಪ್ಪ, ಪರಮೇಶ್ವರಪ್ಪ ಗೂಳೆಪ್ಪರ, ಶಿವನಗೌಡ್ರು, ಪಾತ್ರೆ ರಾಜಪ್ಪ, ಜೀಕಣ್ಣರ ಅಶೋಕ್, ಜಿ.ಎಸ್. ಪ್ರಶಾಂತ್ ಕುಮಾರ್, ಶ್ರೀಕಾಂತ್ ಜಕ್ಕಿನಕೊಪ್ಪ, ಎನ್. ಗಿರೀಶ್ ಕುಮಾರ್, ಗೋಣಿ ಸಂದೀಪ್, ಬೆಣ್ಣೆ ಪ್ರವೀಣ್, ಗೋಣಿ ಯಶವಂತ್, ಸಂದಿಮನಿ ಶಿವು, ಉಪಸ್ಥಿತರಿದ್ದರು.
English Summary: MP B.Y. Raghavendra inaugurated the Geethotsava program.
Leave a comment