ಶಿಕಾರಿಪುರ ಲೈವ್:
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಆಡಳಿತಾಧಿಕಾರಿಗಳ ನೌಕರರ ಸಂಘದ ನೇತೃತ್ವದಲ್ಲಿ ಗ್ರಾಮ ಆಡಳಿತಾಧಿಕಾರಿಗಳು ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಐದು ದಿನಗಳಿಂದ ನಡೆಸುತ್ತಿದ್ದ ಎರಡನೇ ಹಂತದ ಅನಿರ್ಧಿಸ್ಠಾವಧಿ ಮುಷ್ಕರ ಸ್ಥಳಕ್ಕೆ ಶುಕ್ರವಾರ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ನೀಡಿ ಆಧಿಕಾರಿಗಳಿಂದ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಿ.ವೈ. ವಿಜಯೇಂದ್ರ, ಅಂತರ್ ಜಿಲ್ಲಾ ಪತಿ-ಪತ್ನಿ ಪ್ರಕರಣ ವರ್ಗಾವಣೆಗೆ ಚಾಲನೆ ನೀಡಬೇಕು. ಸೇವೆ ಆಧಾರದಲ್ಲಿ ಅಂತರ್‌ಜಿಲ್ಲೆ ವರ್ಗಾವಣೆಗೆ ಅವಕಾಶ ನೀಡಬೇಕು. ಮೊಬೈಲ್ ತಂತ್ರಾಂಶ ಕಾರಣಕ್ಕೆ ಈವರೆಗೆ ಆಗಿರುವ ಎಲ್ಲ ಅಮಾನತು ರದ್ದುಪಡಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಆಡಳಿತಾಧಿಕಾರಿಗಳು ನೀಡಿರುವ ಮನವಿ ಬಗ್ಗೆ ಸಚಿವರು ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಬೇಡಿಕೆ ಈಡೇರಿಸುವಂತೆ ಒತ್ತಾಯಿಸುತ್ತೇನೆ. ಕಂದಾಯ ಇಲಾಖೆ ಆಧಿಕಾರಿಗಳು ಗ್ರಾಮೀಣ ಭಾಗದ ಜನರ ಬೆನ್ನೇಲುಬು ಎಂದರು ತಪ್ಪಾಗಲಾರದು. ಆದರೆ ನೀವು ಅನಿರ್ಧಿಸ್ಠಾವಧಿ ಮುಷ್ಕರ ಮಾಡುತ್ತಿರುವುದರಿಂದ ಆಡಳಿತ ವ್ಯವಸ್ಥೆ ಹಾಳಾಗುತ್ತಿದೆ. ಜನರ ಅನುಕೂಲಕ್ಕಾಗಿ ನೀವು ಅನಿರ್ಧಿಸ್ಠಾವಧಿ ಮುಷ್ಕರ ಕೈಬಿಟ್ಟು ಆಡಳಿತ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ಪುರಸಭೆ ಸದಸ್ಯರಾದ ಭದ್ರಾಪುರ ಫಾಲಾಕ್ಷ, ರೇಣುಕಾಸ್ವಾಮಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸಂಕ್ಲಾಪುರ ಹನುಮಂತಪ್ಪ, ಗ್ರಾಮ ಆಡಳಿತ ಅಧಿಕಾರಿಗಳ ನೌಕರರ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಎಂ.ಎಚ್. ಹರ್ಷ, ಗೌರವಾಧ್ಯಕ್ಷ ಗಿರೀಶ್ ಗೌಡ, ತಾಲ್ಲೂಕು ಕಂದಾಯ ನೌಕರರ ಸಂಘದ ಅಧ್ಯಕ್ಷ ಮಿಥುನ್ ಕುಮಾರ್,ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಉಪಾಧ್ಯಕ್ಷ ಮಹಾರುದ್ರಪ್ಪ, ತಾಲ್ಲೂಕು ಸರ್ಕಾರಿ ನೌಕರರ ಸಂಘದಉಪಾಧ್ಯಕ್ಷ ಪ್ರವೀಣ್, ಪದಾಧಿಕಾರಿಗಳಾದ ನಾಗರಾಜ್, ಗಣೇಶ್, ಯಲ್ಲಾಲಿಂಗ, ಅವಿನಾಶ್, ಅಸ್ಪಾಕ್ ಆಹಮದ್, ಮಂಜುನಾಥನಾಯ್ಕ, ರಾಹುಲ್ ರಾಥೋಡ್, ದುಗ್ಗತಿ ನಾಗರಾಜ್, ಶಿವಾನಂದ್, ಮಹೇಶ್, ಪ್ರವೀಣ್, ಸತೀಶ್,ದಾನೇಶ, ದೀಪಕ್, ಉಮಾಶಂಕರ್, ದಾನೇಶ್, ಮುದುಕಜ್ಜ, ವಿನಾಯಕ, ಕುಮಾರಸ್ವಾಮಿ, ಅರುಣ್, ವಿಠಲ, ಹೇಮಾವತಿ, ಭಾವನಾ, ಸೀಮಾ, ರುಕ್ಮಿಣಿ, ಸುಮಿತ್ರಾಬಾಯಿ, ರೂಪಾ, ಶಾರದಮ್ಮ, ಗೀತಾ, ಪೂಜಾ, ನೀಲಮ್ಮ, ಕಲ್ಪನಾ, ಸುಬ್ಬಮ್ಮ ಉಪಸ್ಥಿತರಿದ್ದರು.
Leave a comment