Home ನಿಂಬೆಗೊಂದಿ ಗ್ರಾಮ: ಕುಸ್ತಿ ಪಂದ್ಯಾವಳಿಗೆ ಸಂಸದರಾದ ಬಿ.ವೈ. ರಾಘವೇಂದ್ರ ಚಾಲನೆ
Home

ನಿಂಬೆಗೊಂದಿ ಗ್ರಾಮ: ಕುಸ್ತಿ ಪಂದ್ಯಾವಳಿಗೆ ಸಂಸದರಾದ ಬಿ.ವೈ. ರಾಘವೇಂದ್ರ ಚಾಲನೆ

Share
Share

ಶಿಕಾರಿಪುರ ಲೈವ್: ತಾಲ್ಲೂಕಿನ ನಿಂಬೆಗೊಂದಿ ಗ್ರಾಮದಲ್ಲಿ ಸೋಮವಾರ ಗುರು ಕೊಟ್ಟೂರೇಶ್ವರ ಸ್ವಾಮಿ ದೇವರ ರಥೋತ್ಸವ ಪ್ರಯುಕ್ತ ನಡೆದ ಕುಸ್ತಿ ಪಂದ್ಯಾವಳಿಗೆ ಸಂಸದರಾದ ಬಿ.ವೈ. ರಾಘವೇಂದ್ರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಗ್ರಾಮೀಣ ಕ್ರೀಡೆಯಾದ ಕುಸ್ತಿ ಕ್ರೀಡೆಯನ್ನು ಯುವಪೀಳಿಗೆ ಉಳಿಸಿ ಬೆಳೆಸಬೇಕು‌.ರಾಜ ಮಹಾರಾಜರ ಕಾಲದಿಂದ ಕುಸ್ತಿ ಕ್ರೀಡೆಗೆ ಪ್ರೋತ್ಸಾಹ ದೊರೆಯುತ್ತಿದೆ. ಗುರು ಕೊಟ್ಟೂರೇಶ್ವರ ಸ್ವಾಮಿ ದೇವರ ರಥೋತ್ಸವ ಪ್ರಯುಕ್ತ ಅದ್ದೂರಿಯಾಗಿ ಕುಸ್ತಿ ಪಂದ್ಯಾವಳಿ ಆಯೋಜಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಕುಸ್ತಿ ಪಂದ್ಯಾವಳಿ ಆಗಮಿಸಿರುವ ಎಲ್ಲಾ ಪೈಲ್ವಾನರಿಗೆ ಸ್ವಾಗತ ಕೊರುತ್ತೇನೆ ಎಂದರು.

ಕುಸ್ತಿ ಪಂದ್ಯಾವಳಿ ಚಾಲನೆ ನೀಡುವ ಮುನ್ನ ಸಂಸದರಾದ ಬಿ.ವೈ. ರಾಘವೇಂದ್ರ ಗುರುಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪೈಲ್ವಾನರು ಕುಸ್ತಿ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರಿದರು.

ಗುರುಕೊಟ್ಟೂರೇಶ್ವರ ದೇವಸ್ಥಾನ ಕಾರ್ಯಕಾರಿ ಸಮಿತಿ ಅಧ್ಯಕ್ಷ ನಾಗರಾಜಪ್ಪಗೌಡ್ರು, ಪದಾಧಿಕಾರಿಗಳು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Home

ಸಮಾನತೆಯಿಂದ ಬದುಕಲು ಅಗತ್ಯವಾದ ಸಂವಿಧಾನ ಅಂಬೇಡ್ಕರ್ ನೀಡಿದ್ದಾರೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ

ಶಿಕಾರಿಪುರ ಲೈವ್: ದೇಶದಲ್ಲಿ ಎಲ್ಲಾ ಜಾತಿಯ ಜನರು ತಾರತಮ್ಯವಿಲ್ಲದೇ ಸಮಾನತೆಯಿಂದ ಜೀವನ ನಡೆಸಲು ಅಗತ್ಯವಾದ ಸಂವಿಧಾನವನ್ನು...

Home

ಬೈಕ್ ಕಳ್ಳತನ ಆರೋಪಿಗಳು ಹಾಗೂ 16 ಬೈಕ್ ವಶಕ್ಕೆ ಪಡೆದ ಪೊಲೀಸರು

ಶಿಕಾರಿಪುರ ಲೈವ್: ಶಿಕಾರಿಪುರ ಪಟ್ಟಣ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬೈಕ್ ಕಳ್ಳತನ ನಡೆಸಿದ ಆರೋಪಿಗಳನ್ನು ಪಟ್ಟಣ...

Home

ಹಿರಿಯ ವಕೀಲರಾದ ಸದಾಶಿವರೆಡ್ಡಿ ಮೇಲೆ ನಡೆದ ಹಲ್ಲೆ ಖಂಡಿಸಿ ವಕೀಲರ ಪ್ರತಿಭಟನೆ

ಶಿಕಾರಿಪುರ ಲೈವ್: ಕರ್ನಾಟಕ ರಾಜ್ಯ ವಕೀಲರ ಪರಿಷತ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಸದಾಶಿವ...

Home

ಸಮಾನತೆಯಿಂದ ಬದುಕಲು ಅಂಬೇಡ್ಕರ್ ಸಂವಿಧಾನ ಸಹಕಾರಿ: ಪುರಸಭೆ ಅಧ್ಯಕ್ಷೆ ಸುನಂದಾ ಮಂಜುನಾಥ್

ಶಿಕಾರಿಪುರ ಲೈವ್: ಮನುಷ್ಯ ಸಮಾನತೆಯಿಂದ ಬದುಕಲು ಅಂಬೇಡ್ಕರ್ ನೀಡಿದ ಸಂವಿಧಾನ ಸಹಕಾರಿಯಾಗಿದೆ ಎಂದು ಪುರಸಭೆ ಅಧ್ಯಕ್ಷೆ...