ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಲಾಟೆಯಲ್ಲಿ ಅನ್ಯಕೋಮಿನ ಯುವಕ ಮತ್ತೊಬ್ಬ ಯುವಕನಿಗೆ ಚಾಕುವಿನಿಂದ ಚುಚ್ಚಿದ ಘಟನೆ ಶನಿವಾರ ರಾತ್ರಿ ಪಟ್ಟಣದ ಮಾಸೂರು ಸರ್ಕಲ್ ನಲ್ಲಿ ನಡೆದಿದೆ.
ಪಟ್ಟಣದ ಮಾಸೂರು ಸರ್ಕಲ್ ನಲ್ಲಿ ವಾಹನ ದಟ್ಟಣೆ ಹೆಚ್ಚಾದ ಸಂದರ್ಭದಲ್ಲಿ ಬೈಕ್ ಹಾರ್ನ್ ಹೊಡೆಯುವ ವಿಷಯಕ್ಕೆ ಸಂಬಂಧಿಸಿದಂತೆ ಯುವಕರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭ ಘಟನೆ ನಡೆದ ಸ್ಥಳದ ಪಕ್ಕದಲ್ಲಿಯೇ ಇದ್ದ ಹಣ್ಣಿನ ಅಂಗಡಿಯಲ್ಲಿದ್ದ ಚಾಕು ತೆಗೆದುಕೊಂಡ ಅನ್ಯಕೋಮಿನ ಯುವಕ ಇನ್ನೊಬ್ಬ ಯುವಕನಿಗೆ ಚುಚ್ಚಿದ್ದಾನೆ. ಚಾಕು ಚುಚ್ಚಿದ ಪರಿಣಾಮ ಗಾಯಗೊಂಡ ಯುವಕನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ರವಾನಿಸಲಾಗಿದೆ. ಚೂರಿಹಾಕಿದ ಯುವಕನನ್ನು ಪಟ್ಟಣ ಠಾಣೆ ಪೊಲೀಸರು ವಶಕ್ಕೆ ಪಡೆದು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ
Leave a comment