ಶಿಕಾರಿಪುರ ಲೈವ್:
ಸಂಪ್ರದಾಯದಂತೆ ಕಾನೂರು ದುರ್ಗಮ್ಮ ದೇವಿಯ ಮೂರ್ತಿಯನ್ನು ಭಕ್ತರು ವಿವಿಧ ಕಲಾ ಮೇಳದ ಮೆರವಣಿಗೆಯೊಂದಿಗೆ ಪಟ್ಟಣದ ತವರು ಮನೆಗಳಿರುವ ಪ್ರದೇಶಕ್ಕೆ ಕರೆತಂದು ಪೂಜೆ ಸಲ್ಲಿಸಿದರು.
ಪಟ್ಟಣದ ತೇರು ಬೀದಿ ಸಮೀಪವಿರುವ ದುರ್ಗಮ್ಮ ದೇವಸ್ಥಾನದ ದುರ್ಗಮ್ಮ ದೇವಿ ಮೂರ್ತಿಯನ್ನು ಪ್ರತಿ ವರ್ಷದ ಸಂಪ್ರದಾಯದಂತೆ ವಿವಿಧ ಪುಷ್ಪಗಳ ಅಲಂಕಾರದೊಂದಿಗೆ ತವರು ಮನೆಗಳಿರುವ ಪ್ರದೇಶವೆಂದೇ ಕರೆಯುವ ದೊಡ್ಡಕೇರಿ,ಚೊರಡೇರಕೇರಿ,ಹರಳೆಣ್ಣೆ ಕೇರಿ,ಹೊಸಕೇರಿ,ಕಡೆಕೇರಿ ಸೇರಿದಂತೆ ಹಲವು ಬಡಾವಣೆಗಳಿಗೆ ಮುಂಜಾನೆ ತಮಟೆ ವಾದ್ಯ ಸೇರಿದಂತೆ ವಿವಿಧ ವಾದ್ಯದೊಂದಿಗೆ ಭಕ್ತರು ಕರೆ ತಂದರು.
ದೇವಿಯ ಮೆರವಣಿಗೆ ಆಗಮಿಸಿದ ಸಂದರ್ಭದಲ್ಲಿ ಭಕ್ತರು ತಮ್ಮ ಮನೆಯ ಮುಂದಿನ ರಸ್ತೆಯನ್ನು ಸ್ವಚ್ಛಗೊಳಿಸುವ ಮೂಲಕ ವಿವಿಧ ಬಗೆಯ ರಂಗೋಲಿ ಬಿಡಿಸಿ ದುರ್ಗಮ್ಮ ದೇವಿ ಮೂರ್ತಿ ಮೆರವಣಿಗೆ ಸ್ವಾಗತಿಸಿ,ದೇವಿಗೆ ವಿಶೇಷ ಪೂಜೆ ಸಲ್ಲಿದರು. ಈ ಸಂದರ್ಭದಲ್ಲಿ ಚೌಟಗಿ ಹಿಡಿದು ದೇವಿಯ ಭಕ್ತಿ ಗೀತೆಗಳನ್ನು ಗಾಯನ ಮಾಡುತ್ತಿದ್ದ ಜೋಗಪ್ಪನವರು ದುರ್ಗಮ್ಮ ದೇವಿಯ ಮೂರ್ತಿ ಮೆರವಣಿಗೆಗೆ ರಂಗು ತಂದರು.
Leave a comment