ಶಿಕಾರಿಪುರ ಲೈವ್:
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೀವ ತ್ಯಾಗ ಮಾಡಿದ ಮಹನೀಯರನ್ನು ಸ್ಮರಿಸಬೇಕು ಎಂದು ಸಿಪಿಐ ಸಂತೋಷ್ ಪಾಟೀಲ್ ಸಲಹೆ ನೀಡಿದರು.
ಪಟ್ಟಣದ ಹಳೇ ಗ್ರಂಥಾಲಯ ಮುಂಭಾಗವಿರುವ ಈಸೂರು ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಆವರಣದಲ್ಲಿ ಶನಿವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಚಲೇಜಾವ್ ಚಳುವಳಿ ಒಂದು ನೆನಪು ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಬ್ರಿಟೀಷ್ ಕಾನೂನಿನ ವಿರುದ್ಧ ಹಾಗೂ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ನಮ್ಮ ಹಿರಿಯರು ಹೋರಾಟ ಮಾಡಿದ್ದಾರೆ. ಈ ಹೋರಾಟಗಾರ ಆದರ್ಶವನ್ನು ಯುವಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮೊಬೈಲ್ ಬಳಕೆಗೆ ಹೆಚ್ಚು ಒತ್ತು ನೀಡದೇ, ಭಾರತ ಸಂವಿಧಾನದ ಪುಸ್ತಕವನ್ನು ಓದಬೇಕು. ಸಂವಿಧಾನದ ಮೂಲಕ ದೊರೆತ ಕಾನೂನಿನ ನಿಯಮಗಳನ್ನು ತಿಳಿದುಕೊಂಡು ಕಾನೂನಿನ ನಿಯಮಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಕೆ.ಎಸ್. ಹುಚ್ರಾಯಪ್ಪ ಪ್ರಾಸ್ತವಿಕವಾಗಿ ಮಾತನಾಡಿದರು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಲ್. ರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪುರಸಭೆ ಅಧ್ಯಕ್ಷೆ ಸುನಂದಾ ಮಂಜುನಾಥ್ ಬಾಳೆಕಾಯಿ, ಹಿರಿಯ ಪತ್ರಕರ್ತರಾದ ಎಸ್.ಬಿ ಮಠದ್, ಬಿ ಸಿ ವೇಣುಗೋಪಾಲ್, ಬಾಲಕೃಷ್ಣ ಜೋಯಿಸ್, ಎಸ್. ಬಿ. ಅರುಣ್ ಕುಮಾರ್ ಸಂಘದ ಉಪಾಧ್ಯಕ್ಷರಾದ ಕೋಟೇಶ್ವರ್, ಖಜಾಂಚಿ ಬಗನಕಟ್ಟೆ ಮಂಜಪ್ಪ, ಚಂದ್ರಶೇಖರ್ ಮಠದ್, ಪಿ.ಕಾಳಿಂಗರಾವ್, ಪ್ರೆಸ್ ಟ್ರಸ್ಟ್ ಅಧ್ಯಕ್ಷ ವೈಭವ್ ಬಸವರಾಜ್, ಬಾಪೂಜಿ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಬಿ. ಪಾಪಯ್ಯ, ಹಿರಿಯ ವಕೀಲರಾದ ಕೊಡಪ್ಪ, ಉಪನ್ಯಾಸಕ ರಾಘವೇಂದ್ರ, ಸದಾಶಿವ, ಶಿಕ್ಷಕರಾದ ಕಾಂತರಾಜ್, ಎನ್. ಸಿ. ಸಿ ವಿದ್ಯಾರ್ಥಿಗಳು ಭಾರತ್ ಸ್ಕೌಟ್ ಮತ್ತು ಗೈಡ್ಸ್, ರೇಂಜರ್, ರೋವರ್ ಉಪಸ್ಥಿತರಿದ್ದರು.
Leave a comment