ಶಿಕಾರಿಪುರ ಲೈವ್:
ಶಿಕಾರಿಪುರ ಪಟ್ಟಣ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬೈಕ್ ಕಳ್ಳತನ ನಡೆಸಿದ ಆರೋಪಿಗಳನ್ನು ಪಟ್ಟಣ ಠಾಣೆಯ ಪೋಲಿಸರು ವಶಕ್ಕೆ ಪಡೆದು ಆರೋಪಿಗಳಿಂದ 16 ಬೈಕ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಳ್ಳತನ ಪ್ರಕರಣದ ಆರೋಪಿಗಳಾದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ದೊಡ್ಡಲಿಂಗೇನಹಳ್ಳಿ ಗ್ರಾಮದ ನಿವಾಸಿ ಪ್ರತಾಪ್(33 ವರ್ಷ) ಹಾಗೂ ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಬಿಳಚೋಡ್ ಗ್ರಾಮದ ನಿವಾಸಿ ಭೋಜರಾಜ(32 ವರ್ಷ) ಬಂಧಿತ ಆರೋಪಿಗಳಾಗಿದ್ದಾರೆ.
ಶಿಕಾರಿಪುರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 01 ಬೈಕ್, ಅರಸೀಕೆರೆ ಪೊಲೀಸ್ ಠಾಣೆ ವ್ಯಾಪ್ತಿ 1, ತರೀಕೆರೆ ಪೊಲೀಸ್ ಠಾಣೆ ವ್ಯಾಪ್ತಿ 2, ಚನ್ನರಾಯ ಪಟ್ಟಣ ಪೊಲೀಸ್ ಠಾಣೆಯ1, ಶಿರಾ ಪೊಲೀಸ್ ಠಾಣೆ 1, ಚಿತ್ರದುರ್ಗ ಪೊಲೀಸ್ ಠಾಣೆಯ 01, ಜಗಳೂರು ಪೊಲೀಸ್ ಠಾಣೆಯ 1, ಕೂಡ್ಲಿಗಿ ಪೊಲೀಸ್ ಠಾಣೆಯ 1, ಕೊಟ್ಟೂರು ಪೊಲೀಸ್ ಠಾಣೆ 1, ಹಗರೀ ಬೊಮ್ಮನ ಹಳ್ಳಿ ಪೊಲೀಸ್ ಠಾಣೆಯ 1, ಹೊಸಪೇಟೆ ಪೊಲೀಸ್ ಠಾಣೆಯ 1, ಬೆಂಡೆಗೇರೆ ಪೊಲೀಸ್ ಠಾಣೆ 1, ಮುನಿರಾಬಾದ್ ಪೊಲೀಸ್ ಠಾಣೆ 01, ಮುಂಡರಗಿ ಪೊಲೀಸ್ ಠಾಣೆ 01 ಮತ್ತು ಹೂವಿನ ಹಡಗಲಿ ಪೊಲೀಸ್ ಠಾಣೆ 01 ಬೈಕ್ ಸೇರಿ ಅಂದಾಜು 20,50,000/- ರೂಗಳ ಮೌಲ್ಯದ ಒಟ್ಟು 16 ಬೈಕ್ ಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಕಳುವಾದ ಬೈಕ್ ಹಾಗೂ ಆರೋಪಿತರ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎ.ಜಿ. ಕಾರಿಯಪ್ಪ ಮಾರ್ಗದರ್ಶನದಲ್ಲಿ, ಶಿಕಾರಿಪುರ ಡಿವೈಎಸ್ ಪಿ ಕೇಶವ್, ಸಿಪಿಐ ಸಂತೋಷ್ ಪಾಟೀಲ್, ಶಿಕಾರಿಪುರ ಪಟ್ಟಣ ಠಾಣೆ ಪಿಎಸ್ ಐ ಶರತ್ ನೇತೃತ್ವದಲ್ಲಿ ಸಿಬ್ಬಂದಿ ಎಎಸ್ಐ ಮಲ್ಲೇಶಪ್ಪ, ವಿಶ್ವನಾಥ್, ಸಿಬ್ಬಂದಿ ಸಂದೀಪ್, ಗಂಗಾಧರ್, ಶಿವಾಜಿ, ಗಿರೀಶ್, ಕೊಟ್ರೇಶ್, ಕುಮಾರ್, ಗಜೇಂಧ್ರ, ವಿಜಯ್, ಚೇತನ್ ನಾಗರಾಜ್ ನವೀನ್, ರಾಜ್ ಕುಮಾರ್, ಜಯಶೀಲ, ವೀರೇಶ್, ಇಂದ್ರೇಶ್, ಕೃಷ್ಣಪ್ಪ ರವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.
Leave a comment