ಶಿಕಾರಿಪುರ ಲೈವ್:
ಕಾರು ಡಿಕ್ಕಿ ಹೊಡೆದು ತೀವ್ರ ರೀತಿ ಗಾಯಗೊಂಡಿದ್ದ ಪೃಥ್ವಿರಾಜ್ ಸಿಂಗ್(24) ಗುರುವಾರ ಸಾವನ್ನಪ್ಪಿದ್ದಾರೆ.
ಪೃಥ್ವಿರಾಜ್ ಸಿಂಗ್ ಪಟ್ಟಣದ ಹಳೇ ಆಸ್ಪತ್ರೆ ನಿವಾಸಿ ಹಾಗೂ ಹಿಂದೂ ಮಹಾಸಭಾ ಗಣಪತಿ ಮಾಜಿ ಅಧ್ಯಕ್ಷರಾದ ರವಿಸಿಂಗ್ ಪುತ್ರರಾಗಿದ್ದಾರೆ. ಪೃಥ್ವಿರಾಜ್ ಸಿಂಗ್ ಶಿಕಾರಿಪುರ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ಹೋಟೆಲ್ ನಿಂದ ಮಂಗಳವಾರ ರಾತ್ರಿ ಪಾರ್ಸಲ್ ಊಟ ತೆಗೆದುಕೊಂಡು ರಸ್ತೆ ದಾಟುವ ಸಂದರ್ಭದಲ್ಲಿ ಕಾರು ಡಿಕ್ಕಿ ಹೊಡೆದ ಪರಿಣಾಮ ತೀವ್ರ ರೀತಿ ಗಾಯಗೊಂಡಿದ್ದರು. ನಂತರ ಅವರನ್ನು ಚಿಕಿತ್ಸೆಗಾಗಿ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಪೃಥ್ವಿರಾಜ್ ಸಿಂಗ್ ಗುರುವಾರ ಮೃತಪಟ್ಟಿದ್ದಾರೆ.
ಮೃತ ಪೃಥ್ವಿರಾಜ್ ಸಿಂಗ್ ನಾಲ್ಕು ತಿಂಗಳಗಳ ಹಿಂದೆ ವಿವಾಹವಾಗಿದ್ದರು. ಮೃತ ಪೃಥ್ವಿರಾಜ್ ಸಿಂಗ್ ಅಂತ್ಯಕ್ರಿಯೆ ಶುಕ್ರವಾರ ಬೆಳಿಗ್ಗೆ 11ಗಂಟೆಗೆ ಪಟ್ಟಣದ ರುದ್ರಭೂಮಿಯಲ್ಲಿ ನಡೆಯಲಿದೆ.
Leave a comment