ಶಿಕಾರಿಪುರ ಲೈವ್:
ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಪಟ್ಟಣದ ಹಳೇ ಸಂತೆಮೈದಾನದಲ್ಲಿರುವ ಅಂಗಳಪರಮೇಶ್ವರಿ ದೇವಸ್ಥಾನದಲ್ಲಿ ತಮಿಳು ಜನಾಂಗದವರು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸಿದರು.
ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಅಂಗಳ ಪರಮೇಶ್ವರಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬುಧವಾರ ಕರಗ ಪೂಜೆ,ಗುರುವಾರ ಅವತಾರಪೂಜೆ ನಡೆಯಿತು. ಸಂತೆಮೈದಾನದಲ್ಲಿ ಮಣ್ಣಿನಲ್ಲಿ ಚಾಮುಂಡೇಶ್ವರಿ ದೇವಿ ಮೂರ್ತಿಯನ್ನು ನಿರ್ಮಿಸಿ ಪೂಜೆ ಸಲ್ಲಿಸಿದರು. ಗುರುವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಂಗಳ ಪರಮೇಶ್ವರಿ ದೇವಿಯ ಉತ್ಸವ ಮೂರ್ತಿ ಮೆರವಣಿಗೆಯನ್ನು ನಡೆಸಿದರು. ಶುಕ್ರವಾರ ಕುಂಭಪೂಜೆ ಹಾಗೂ ವಿಶೇಷ ಪೂಜೆ ನಡೆಸಿದರು.
Leave a comment