ಶಿಕಾರಿಪುರ ಲೈವ್:
ತಾಲ್ಲೂಕಿನ ರೈತರ ಕೃಷಿ ಭೂಮಿಗೆ ನೀರು ಒದಗಿಸುವ ಅಂಬ್ಲಿಗೊಳ್ಳ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು
ಜಲಾಶಯದ ಕೋಡಿ ಮೇಲೆ ಹರಿದು ಬರುತ್ತಿದ್ದ ನೀರಿನಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಮೀನು ಹಿಡಿಯುತ್ತಿದ್ದ ಸಾಹಸ ದೃಶ್ಯ ಕಂಡು ಬಂದಿತು.
ಶಿಕಾರಿಪುರ ಹಾಗೂ ಸಾಗರ ತಾಲೂಕಿನ ಗಡಿ ಭಾಗದಲ್ಲಿರುವ ಅಂಬ್ಲಿಗೊಳ್ಳ ಜಲಾಶಯ 70.79 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಜಿಲ್ಲೆಯ ಸಾಗರ ಶಿಕಾರಿಪುರ ಭಾಗದಲ್ಲಿ ಸುರಿದ ಮಳೆಯಿಂದ ಜಲಾಶಯಕ್ಕೆ ನೀರು ಹರಿದು ಬಂದಿದ್ದು ಜಲಾಶಯ ಭರ್ತಿಯಾಗಿ ಕೋಡಿ ಮೇಲೆ ನೀರು ಹರಿಯುತ್ತಿದೆ. ತಾಲೂಕಿನ ರೈತರ 3200 ಹೆಕ್ಟೇರ್ ಕೃಷಿ ಭೂಮಿಗೆ ಜಲಾಶಯ ನೀರು ಒದಗಿಸುತ್ತಿದ್ದು, ಜಲಾಶಯ ಭರ್ತಿಯಾಗಿದ್ದರಿಂದ ಜಲಾಶಯ ಅಚ್ಚುಕಟ್ಟು ರೈತರು ಸಂತಸಗೊಂಡಿದ್ದು, ಭತ್ತ ನಾಟಿ ಕಾರ್ಯ ನಡೆಸಲು ಸಿದ್ದತೆ ಮಾಡಿಕೊಳ್ಳಲಿದ್ದಾರೆ.
ಮೀನು ಬೇಟೆಗೆ ಮುಂದಾದ ಗ್ರಾಮಸ್ಥರು:
ಅಂಬ್ಲಿಗೊಳ್ಳ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು
ಜಲಾಶಯ ಕೋಡಿ ಮೇಲೆ ಹರಿದು ಬರುತ್ತಿದ್ದ ನೀರಿನಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಸಣ್ಣ ಬಲೆಗಳ ಮೂಲಕ ಮೀನು ಹಿಡಿಯುತ್ತಿದ್ದ ಸಾಹಸ ದೃಶ್ಯ ಕಂಡು ಬಂದಿತು. ಗಂಟೆಗಟ್ಟಲೆ ತಾಳ್ಮೆಯಿಂದ ಕಾಯುವ ಮೂಲಕ ಕೋಡಿ ಮೇಲಿನ ನೀರಿನಿಂದ ಹಾರುವ ಮೀನುಗಳನ್ನು ಗ್ರಾಮಸ್ಥರು ಚಾಣಕ್ಷತನದಿಂದ ಹಿಡಿಯುತ್ತಿದ್ದರು. ಕೋಡಿ ಕೆಳಗೆ ಸಾಲಿಗೆ ನಿಂತು ಮೀನುಗಳನ್ನು ಹಿಡಿಯುತ್ತಿದ್ದ ಸಾಹಸ ದೃಶ್ಯ ನೋಡುಗರ ಗಮನ ಸೆಳೆಯಿತು. ಗೌರಿ,ಕ್ಯಾಟ್ಲಾ ಚಾಮರಿ ಸೇರಿದಂತೆ ವಿವಿಧ ತಳಿಯ ಮೀನುಗಳು ಗ್ರಾಮಸ್ಥರ ಬಲೆಗೆ ಬಿದ್ದವು.
Leave a comment