ಶಿಕಾರಿಪುರ ಲೈವ್:
ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ(ಟಿಎಪಿಸಿಎಂಎಸ್) ನೂತನ ಅಧ್ಯಕ್ಷರಾಗಿ ಸುನೀತಾ ಯೋಗೇಶಪ್ಪ ಹುಲುಗಿನಕೊಪ್ಪ ಹಾಗೂ ಉಪಾಧ್ಯಕ್ಷರಾಗಿ ನಿಂಬೆಗೊಂದಿ ಸುರೇಶ್ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಸತೀಶ್ ಕುಮಾರ್ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷೆ ಸುನೀತಾ ಯೋಗೇಶಪ್ಪ, ಅವಿರೋಧವಾಗಿ ನಾನು ಅಧ್ಯಕ್ಷೆಯಾಗಲು ಸಹಕಾರ ನೀಡಿದ ಎಲ್ಲಾ ನಿರ್ದೇಶಕರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ.ನಿಮ್ಮ ಸಲಹೆ,ಸಹಕಾರ ಹಾಗೂ ಮಾರ್ಗದರ್ಶನ ಪಡೆದು ಟಿಎಪಿಸಿಎಂಎಸ್ ನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.
ನಿರ್ದೇಶಕ ಚುರ್ಚಿಗುಂಡಿ ಶಶಿಧರ್ ಮಾತನಾಡಿ, ಒಂದು ಸಂದರ್ಭದಲ್ಲಿ ನಷ್ಟದಲ್ಲಿದ್ದ ಈ ಸಂಸ್ಥೆ ಇಂದು ಲಾಭದಲ್ಲಿದೆ. ತಾಲೂಕಿನ ರೈತರಿಗೆ ಅಗತ್ಯವಾದ ಗೊಬ್ಬರ ಒದಗಿಸುತ್ತಿದೆ. ಸಂಸ್ಥೆಗೆ ಲಾಭ ಬರಲು ಪೆಟ್ರೋಲ್ ಬಂಕ್ ಹಾಗೂ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ. ನೂತನ ಅಧ್ಯಕ್ಷರಿಗೆ ಎಲ್ಲರೂ ಸಹಕಾರ ನೀಡುತ್ತೇವೆ ಎಂದರು.
ನಿರ್ದೇಶಕರಾದ ಅಗಡಿ ಅಶೋಕ್, ಬಿ ಡಿ ಭೂಕಾಂತ್, ಎ.ಬಿ. ಸುಧೀರ್, ಪ್ರೇಮಾ ಸುರೇಶ್, ಮೊಟ್ಟೇರ್ ಗಿಡ್ಡಪ್ಪ, ರಮೇಶ್ ನಾಯ್ಕ, ವೀರನಗೌಡ, ಗಿರೀಶ್, ಸಿ ಪಿ ಹೆಗಡೆ, ಮಲ್ಲೇಶಪ್ಪ ಕವಲಿ, ಮಾಜಿ ಅಧ್ಯಕ್ಷ ಸುರೇಶ್ ಗೌಡ್ರು, ಜಯನಾಯ್ಕ, ಎಸ್.ಎಸ್. ರಾಘವೇಂದ್ರ, ಮಾಜಿ ಉಪಾಧ್ಯಕ್ಷರಾದ ಗಂಗಾಧರ್, ಅನೂಪ್, ಕಾರ್ಯದರ್ಶಿ ಗಣೇಶ್, ಮುಖಂಡರಾದ ಎಂ.ಬಿ. ಚನ್ನವೀರಪ್ಪ, ಅಂಬಾರಗೊಪ್ಪ ಶೇಖರಪ್ಪ, ತೊಗರ್ಸಿ ಹನುಮಂತಪ್ಪ, ಹುಲ್ಮಾರ್ ಮಹೇಶ್, ಸಂಕ್ಲಾಪುರ ಹನುಮಂತಪ್ಪ, ನಿಂಬೆಗೊಂದಿ ಸಿದ್ದಲಿಂಗಪ್ಪ, ಹಳ್ಳೂರು ಪರಮೇಶ್ವರಪ್ಪ, ಬೆಣ್ಣೆ ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.
Leave a comment