ಶಿಕಾರಿಪುರ ಲೈವ್:
ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ( ಟಿಎಪಿಸಿಎಂಎಸ್) 75ನೇ ವರ್ಷದ ವಜ್ರ ಮಹೋತ್ಸವ ಸಮಾರಂಭ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭ ಆಗಸ್ಟ್.17ರಂದು ಬೆಳಿಗ್ಗೆ 10ಕ್ಕೆ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ ಎಂದು ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಎ.ಬಿ. ಸುಧೀರ್ ಮಾರವಳ್ಳಿ ತಿಳಿಸಿದರು.
ಪಟ್ಟಣದ ಸುದ್ದಿಮನೆಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕಾರಿಪುರ ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘವು 1949ರಲ್ಲಿ ಸ್ಥಾಪನೆಯಾಗಿದ್ದು, ಕೆ.ವಿ. ನರಸಪ್ಪನವರು ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ಇದುವರೆಗೆ 52 ಜನ ಅಧ್ಯಕ್ಷರುಗಳು ಹಾಗೂ 6 ಜನ ಉಪಾಧ್ಯಕ್ಷರಾಗಿ ಹಾಗೂ 29 ಜನ ಕಾರ್ಯದರ್ಶಿಗಳಾಗಿ ಸಂಸ್ಥೆಯಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ. ಸಂಘದ ಆಡಳಿತ ಮಂಡಳಿಯಲ್ಲಿ ಪ್ರಸ್ತುತ ಸಂಘದ 53ನೇ ಅಧ್ಯಕ್ಷನಾಗಿ ನಾನು ಸೇವೆ ಸಲ್ಲಿಸುತ್ತಿದ್ದೇನೆ. ಉಪಾಧ್ಯಕ್ಷರಾಗಿ ಎಂ.ಎಸ್. ಪ್ರೇಮ ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ಸಂಘ 75 ವರ್ಷಗಳಿಂದ ರೈತರ ಪರ ಕೆಲಸ ಮಾಡುತ್ತಿದೆ ಎಂದರು.
ಆಗಸ್ಟ್ 17 ಭಾನುವಾರ ವಜ್ರಮೋತ್ಸವ ಸಮಾರಂಭವನ್ನು ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ಉದ್ಘಾಟಿಸಲಿದ್ದಾರೆ ನೆನಪಿನ ಕಾಣಿಕೆ ವಿತರಣೆಯನ್ನು ಚಿಲ್ಲೋ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ವಿತರಣೆ ಮಾಡಲಿದ್ದಾರೆ ಹಿರಿಯ ಸಹಕಾರಿಗಳಿಗೆ ಸಂಸದ ಬಿ ವೈ ರಾಘವೇಂದ್ರ ಸನ್ಮಾನ ಮಾಡದಿದ್ದಾರೆ ಶಾಸಕ ಬಿ ವೈ ವಿಜಯೇಂದ್ರ ಸ್ಮರಣ ಸಂಚಿಕೆಯನ್ನು ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಸಮಾರಂಭದಲ್ಲಿ ಜಿಲ್ಲೆಯ ವಿಧ ತಾಲೂಕಿನ ಶಾಸಕರು ವಿಧಾನಪರಿಷತ್ ಸದಸ್ಯರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ತಾಲೂಕಿನ ರೈತರು ಹಾಗೂ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ವಜ್ರ ಮಹೋತ್ಸವ ಸಮಾರಂಭವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು
ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ಉಪಾಧ್ಯಕ್ಷೆ ಎಂ.ಎಸ್. ಪ್ರೇಮ ನಿರ್ದೇಶಕರಾದ ಬಿ.ಡಿ. ಭೂಕಾಂತ್, ಶಶಿಧರ ಚುರ್ಚಿಗುಂಡಿ, ಡಿ.ಎಲ್. ಬಸವರಾಜ್, ಎಸ್.ಎಸ್. ಮಾಜಿ ರಾಘವೇಂದ್ರ, ಬಿ. ಜಯನಾಯ್ಕ, ಬಿ. ಅನೂಪ್, ಬಸವಣ್ಣಪ್ಪ, ವೈ.ಅರ್. ಸುನಿತಾ, ಗಿರೀಶ್ ಹರಳೆಣ್ಣೆ, ಜಿ.ಬಿ. ವೀರಣ್ಣಗೌಡ, ಕಾರ್ಯದರ್ಶಿ ಗಣೇಶ್ ಉಪಸ್ಥಿತರಿದ್ದರು
Leave a comment