ಶಿಕಾರಿಪುರ ಲೈವ್:
ರೈತರ ಕಷ್ಟಕ್ಕೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಶಾಸಕ ಬಿ.ವೈ. ವಿಜಯೇಂದ್ರ ಸೂಚಿಸಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಕೃತಿ ವಿಕೋಪದಿಂದ ಹಾನಿಯಾದ ಪ್ರದೇಶಗಳಿಗೆ ಅಧಿಕಾರಿಗಳು ತಕ್ಷಣ ಭೇಟಿ ನೀಡಿ ಪರಿಶೀಲನೆ ನಡೆಸಿ ನಾಗರಿಕರಿಗೆ ಸಾಂತ್ವನ ಹೇಳಬೇಕು. ರೈತರಿಗೆ ಬೆಳೆ ವಿಮೆ ಮಾಡಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕು. ಯೂರಿಯಾ ಗೊಬ್ಬರ ಅಭಾವಗದಂತೆ ಗಮನ ಹರಿಸಬೇಕು. ರೈತರ ಕೃಷಿ ಭೂಮಿಗೆ ದಾರಿ ಮಾಡಿಕೊಡಬೇಕು. ಡೆಂಗೆ ರೋಗ ಹರಡದಂತೆ ಜಾಗೃತಿ ವಹಿಸಬೇಕು. ಶಾಲಾ ಕಟ್ಟಡಗಳು ಸುಸ್ಸಜಿತವಾಗಿದೆಯೇ ಎಂಬ ಬಗ್ಗೆ ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು.
ತಾಲ್ಲೂಕಿನ ಜನತೆಗೆಮೂಲಭೂತ ಸೌಲಭ್ಯಗಳ ಕೊರತೆ ಯಾಗದಂತೆ ಕ್ರಮಕೈಗೊಳ್ಳಬೇಕು. ರೈತರಿಗೆ ಟಿಸಿ ರಿಪೇರಿ ಸೇರಿದಂತೆ ಇತರೆ ಕಾರ್ಯಗಳಿಗೆ ಮೆಸ್ಕಾಂ ಕಚೇರಿಗೆ ಅಲೆದಾಡಿಸಬಾರದು. ವಿದ್ಯಾರ್ಥಿ ನಿಲಯದಲ್ಲಿ ಗುಣಮಟ್ಟದ ಆಹಾರ ನೀಡಲು ಆದ್ಯತೆ ನೀಡಬೇಕು. ವಿದ್ಯಾರ್ಥಿ ನಿಲಯದಲ್ಲಿ ಮೇಲ್ವಿಚಾರಕರು ಮಕ್ಕಳ ಬಗ್ಗೆ ಜಾಗೃತಿ ವಹಿಸಬೇಕು ಎಂದು ಸಲಹೆ ನೀಡಿದರು.
ತಹಶೀಲ್ದಾರ್ ಮಲ್ಲೇಶ್ ಬಿ.ಪೂಜಾರ್, ತಾಲೂಕು ಪಂಚಾಯಿತಿ ಇಒ ನಾಗರಾಜ್, ವಿವಿಧ ಇಲಾಖೆ ಅಧಿಕಾರಿಗಳಾದ ಡಾ.ಕಿರಣ್ ಕುಮಾರ್ ಹರ್ತಿ, ಲೋಕೇಶಪ್ಪ, ಮಂಜುನಾಥ್, ಬಾಲರಾಜ್, ನಾಗೇಶಪ್ಪ ರವೀಂದ್ರನಾಯಕ್, ಮಧುಸೂಧನ್, ಉಮೇಶ್, ಮಿಥುನ್, ದೇನ್ಯಾನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
Leave a comment