ಶಿಕಾರಿಪುರ ಲೈವ್:
ಜೀವನದಲ್ಲಿ ಪ್ರತಿಯೊಬ್ಬರು ಸಾಧನೆ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಶಿವಮೊಗ್ಗ ಬಸವ ಕೇಂದ್ರದ ಪೀಠಾಧ್ಯಕ್ಷ ಡಾ.ಬಸವ ಮರುಳಸಿದ್ದ ಸ್ವಾಮೀಜಿ ಸಲಹೆ ನೀಡಿದರು.
ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಈಶ್ವರ್ ಫೌಂಡೇಶನ್ ಉದ್ಘಾಟನೆ,ಎಸ್ಸೆಸ್ಸೆಲ್ಸಿ ಪಿಯುಸಿ ಪರೀಕ್ಷೆ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಆಯೋಜಿಸಿದ್ದ ಕಾರ್ಯಾಗಾರದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಅಹಂಕಾರ,ಆಲಸ್ಯ ಹಾಗೂ ಅಜ್ಞಾನದಿಂದ ಮುಕ್ತರಾಗಲು ಜಗತ್ತನ್ನು ತೆರೆದ ಕಣ್ಣಿನಿಂದ ನೋಡಬೇಕು ಹಾಗೂ ತೆರೆದ ಹೃದಯದಿಂದ ಗ್ರಹಿಸಬೇಕು. ಜಗತ್ತು ಎಂತಹ ಸಂದರ್ಭದಲ್ಲೂ ನಾವು ಬದುಕಲು ಅವಕಾಶ ನೀಡುತ್ತದೆ. ಸೋಲು,ನೋವನ್ನು ಸಕರಾತ್ಮವಾಗಿ ಸ್ವೀಕಾರ ಮಾಡುವ ಮನಸ್ಥಿತಿ ಬೆಳೆಸಿಕೊಂಡಾಗ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ತಾಳ್ಮೆ ನಮ್ಮನ್ನು ಜೀವನದಲ್ಲಿ ನಮ್ಮನ್ನು ಎತ್ತರ ಮಟ್ಟಕ್ಕೆ ಕೊಂಡುಯುತ್ತದೆ ಎಂದು ಸಲಹೆ ನೀಡಿದರು.
ಸ್ವಾರ್ಥಕ್ಕಾಗಿ ಜೀವನ ನಡೆಸದೇ ಸಮಾಜಕ್ಕೆ ಕೊಡುಗೆ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು.
ಸಮಾಜ ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಎನ್.ವಿ. ಈರೇಶ್ ಅವರು ಈಶ್ವರ್ ಫೌಂಡೇಶನ್ ಆರಂಭಿಸುವ ಮೂಲಕ ಸಮಾಜ ಸೇವೆ ಮಾಡಲು ಮುಂದಾಗಿರುವುದು ಒಳ್ಳೆ ಕಾರ್ಯವಾಗಿದೆ. ಈ ಸಂಸ್ಥೆ ಉತ್ತಮ ರೀತಿ ಕೆಲಸ ಮಾಡಲು ನಿವೆಲ್ಲಾ ಸಹಕಾರ ನೀಡಬೇಕು ಎಂದರು.
ಮೂಲೆಗದ್ದೆ ಮಠ ಸದಾನಂದ ಶಿವಯೋಗಾಶ್ರಮದ ಪೀಠಾಧ್ಯಕ್ಷ ಅಭಿನವ ಚನ್ನಬಸವ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಧಾರಾವಾಡ ಸಾಯಿ ಅಕಾಡೆಮಿ ಸಂಸ್ಥಾಪಕ ಡಾ.ಗುರುರಾಜ ಬುಲಬುಲೆ, ಧಾರಾವಾಡ ವಿಸ್ತಾರ ಜಿಂದಗಿ ಪ್ರೈವೆಟ್ ಲಿಮಿಟೆಡ್ ಸಂಸ್ಥಾಪಕ ಮಹೇಶ್ ಮಾಸಾಳ್ ಹಾಗೂ ಶಿಕಾರಿಪುರ ಸಾಧನಾ ಅಕಾಡೆಮಿ ಸಂಸ್ಥಾಪಕ ಬಿ. ಮಂಜುನಾಥ್ ಉಪನ್ಯಾಸ ನೀಡಿದರು.
ಈಶ್ವರ್ ಫೌಂಡೇಶನ್ ಅಧ್ಯಕ್ಷ ಎನ್.ವಿ. ಈರೇಶ್ ಮಾತನಾಡಿ, ಸಮಾಜದಲ್ಲಿರುವ ಜನರ ಸೇವೆಗಾಗಿ
ಸಮಾಜದಿಂದ ಸಮಾಜಕ್ಕಾಗಿ ಶೀರ್ಷಿಕೆ ಅಡಿ ಈಶ್ವರ್ ಫೌಂಡೇಶನ್ ಆರಂಭಿಸಲಾಗಿದೆ. ಈಶ್ವರ್ ಫೌಂಡೇಶನ್ ಕಾರ್ಯಗಳಿಗೆ ನಿಮ್ಮ ಸಹಕಾರವಿರಬೇಕು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ಪ್ರತಿಭಾ ಪುರಸ್ಕಾರ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಾಗಾರ ಆಯೋಜಿಸಲಾಗಿದೆ. ಈ ಕಾರ್ಯಾಗಾರ ನೀವು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಬಿ. ಲೋಕೇಶಪ್ಪ, ಈಶ್ವರ್ ಫೌಂಡೇಶನ್ ಪದಾಧಿಕಾರಿಗಳಾದ ಮಮತಾ ಈರೇಶ್ ಶೋಭಾ ಈಶ್ವರಪ್ಪ, ಸುವರ್ಣ ರವಿ, ವೀಣಾ ಕಿರಣ್, ಕುಮಾರಸ್ವಾಮಿ ಹಿರೇಮಠ್ ಮತ್ತಿತರರು ಉಪಸ್ಥಿತರಿದ್ದರು.
Leave a comment