ಶಿಕಾರಿಪುರ ಲೈವ್:
ವ್ಯಕ್ತಿಯ ಜೀವನದಲ್ಲಿ ಶಿಕ್ಷಣ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಲಹೆ ನೀಡಿದರು.
ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಸೋಮವಾರ ಮೈತ್ರಾದೇವಿ ಯಡಿಯೂರಪ್ಪ ಸೇವಾ ಟ್ರಸ್ಟ್(ಮೈ ಸೇವಾ ಟ್ರಸ್ಟ್) ಬೆಂಗಳೂರು ಆಯೋಜಿಸಿದ್ದ ಸರ್ಕಾರಿ ಶಾಲೆ ಹಾಗೂ ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜೀವನದಲ್ಲಿ ಸಂಪಾದಿಸಿದ ಆಸ್ತಿ ಮತ್ತೊಬ್ಬರ ಸ್ವತ್ತಾಗುತ್ತದೆ. ಆದರೆ ನಾವು ಪಡೆದ ಜ್ಞಾನ ಮತ್ತೊಬ್ಬರ ಸ್ವತ್ತಾಗುವುದಿಲ್ಲ. ತಂದೆ ತಾಯಿ ನಿರೀಕ್ಷೆಗೆ ತಕ್ಕಂತೆ ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನಮಾನ ಪಡೆಯಬೇಕು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಾಲೂಕಿನ ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಗೆ ಒತ್ತು ನೀಡಿದ್ದಾರೆ. ಮಕ್ಕಳಿಗೆ ಅಗತ್ಯವಾದ ಶಾಲಾ,ಕಾಲೇಜು ಹಾಗೂ ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಿದ್ದಾರೆ. ನಮ್ಮ ತಾಯಿ ಮೈತ್ರಾದೇವಿ ಹೆಸರಲ್ಲಿ ಟ್ರಸ್ಟ್ ಆರಂಭಿಸುವ ಮೂಲಕ ಮಕ್ಕಳ ಅನುಕೂಲಕ್ಕಾಗಿ ನೋಟ್ ಬುಕ್ ವಿತರಣೆ ಮಾಡಲಾಗುತ್ತಿದೆ ಎಂದರು.
ಜಯನಗರ ಶಾಸಕ ರಾಮಮೂರ್ತಿ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ಮುಖಂಡರಾದ ಕೊಳಗಿ ರೇವಣಪ್ಪ, ರಾಮಾನಾಯ್ಕ, ಕೆ.ಪಿ. ಮಂಜುನಾಥ್, ಎಂ.ಬಿ. ಚನ್ನವೀರಪ್ಪ. ಸಂಕ್ಲಾಪುರ ಹನುಮಂತಪ್ಪ, ಕೆ.ಜಿ. ವಸಂತಗೌಡ್ರು, ನಿಂಬೆಗೊಂದಿ ಸಿದ್ದಲಿಂಗಪ್ಪ, ತಾಳಗುಂದ ಸತೀಶ್, ಬಿ. ಪಾಪಯ್ಯ, ನಾಗೀಹಳ್ಳಿ ಗಣೇಶ್, ವೀರೇಶ್, ಚಂದ್ರು, ಮತ್ತಿತರರು ಉಪಸ್ಥಿತರಿದ್ದರು.
Leave a comment