ಶಿಕಾರಿಪುರ ಲೈವ್:
ಭಾರತೀಯ ಜನಸಂಘ ಹಾಗೂ ಬಿಜೆಪಿ ಹಿರಿಯ ನಾಯಕರ ಹೋರಾಟ ನಮಗೆಲ್ಲ ಪ್ರೇರಣೆಯಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕರೆ ನೀಡಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಬಿಜೆಪಿ ಆಯೋಜಿಸಿದ್ದ ಭಾರತೀಯ ಜನಸಂಘದ ಸಂಸ್ಥಾಪಕರಾದ ಡಾ.ಶ್ಯಾಮಪ್ರಸಾದ್ ಮುಖರ್ಜಿಯವರ ಸ್ಮೃತಿ ದಿವಸ ಹಾಗೂ ಜನಸಂಘದ ಸ್ಥಾಪಕ ಸದಸ್ಯರಾದ ಜಗನ್ನಾಥರಾವ್ ಜೋಶಿ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
1951 ರಲ್ಲಿ ಜನ ಸಂಘದ ಸ್ಥಾಪನೆಯಲ್ಲಿ ಡಾ.ಶ್ಯಾಮಪ್ರಸಾದ್ ಮುಖರ್ಜಿ ಹಾಗೂ ಜಗನ್ನಾಥರಾವ್ ಜೋಶಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರು ದೇಶಕ್ಕಾಗಿ ಹೋರಾಡಿದ ನಾಯಕರು. ಕರ್ನಾಟಕ ಕೇಸರಿ ಎಂದೆ ಪ್ರಸಿದ್ಧಿಯಾದ ಜೋಷಿಯವರು ಸಹ ದೇಶಕ್ಕಾಗಿ ಪ್ರಾಣವನ್ನೆ ತ್ಯಾಗ ಮಾಡಿದವರಾಗಿದ್ದಾರೆ. ಹಲವು ಹಿರಿಯ ನಾಯಕರ ಹೋರಾಟದಿಂದ ಬಿಜೆಪಿ ಪಕ್ಷ ಬೆಳೆದು ಅಧಿಕಾರ ಹಿಡಿದಿದೆ. ಹಿರಿಯ ನಾಯಕರನ್ನು ನಾವು ಸ್ಮರಣೆ ಮಾಡಿಕೊಳ್ಳಬೇಕು. ಪಕ್ಷ ಸಂಘಟಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ತಾಲೂಕು ಬಿಜೆಪಿ ಆಧ್ಯಕ್ಷ ಹನುಮಂತಪ್ಪ ಸಂಕ್ಲಾಪುರ, ಮುಖಂಡರಾದ ಟಿ.ರಾಮನಾಯ್ಕ, ಕೆ.ಜಿ. ವಸಂತ ಗೌಡ್ರು, ಎಂ.ಬಿ. ಚನ್ನವೀರಪ್ಪ. ಶಿವಪ್ಪ, ಗೀರಿಶ್ ಧಾರವಾಡ. ಎ.ಬಿ. ಸುಧೀರ್. ವೀರನಗೌಡ, ಬೆಣ್ಣೆ ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.
Leave a comment