ಶಿಕಾರಿಪುರ ಲೈವ್:
ಶಿಕಾರಿಪುರ ಸಮೀಪದ ಸಾಲೂರು ರಸ್ತೆಯಲ್ಲಿ ಬಿಸಿಲಿನಲ್ಲಿ ಒಣಗಲು ಹಾಕಿದ ಮೆಕ್ಕೆಜೋಳ ಅಧಿಕ ಮಳೆ ಸುರಿದ ಪರಿಣಾಮ ಮೊಳಕೆಯೊಡೆದ ದೃಶ್ಯವನ್ನು ಸಂಸದ ಬಿ.ವೈ. ರಾಘವೇಂದ್ರ ಬುಧವಾರ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಅಧಿಕ ಮಳೆಯಿಂದ ಜಿಲ್ಲೆಯಲ್ಲಿ ಮೆಕ್ಕೆಜೋಳ ಹಾಗೂ ಭತ್ತ ಬೆಳೆದ ರೈತರು ಸಂಕಷ್ಟ ಅನುಭವಿಸಿದ್ದಾರೆ. ಒಣಗಲು ಹಾಕಿದ ಲಕ್ಷಾಂತರ ರೂಪಾಯಿ ಮೌಲ್ಯದ ಮೆಕ್ಕೆಜೋಳ ಮೊಳಕೆಯೊಡಿರುವುದರಿಂದ ಮಾರಾಟ ಮಾಡಲು ಬರುವುದಿಲ್ಲ. ಬೆಳೆ ನಷ್ಟ ಹೊಂದಿದ ರೈತರಿಗೆ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು. ಸರ್ಕಾರದ ಸಂವಹನ ನಡೆಸಿ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ರೈತರಿಗೆ ಭರವಸೆ ನೀಡಿದರು.
ಮುಖಂಡರಾದ ಕೆ.ಎಸ್. ಗುರುಮೂರ್ತಿ, ಎಂ.ಬಿ. ಚನ್ನವೀರಪ್ಪ, ಮಲ್ಲಿಕಾರ್ಜುನ ರೆಡ್ಡಿ, ಎ.ಬಿ. ಸುಧೀರ್, ಕೆ.ಜಿ. ಶಿವಪ್ಪಯ್ಯ, ಬೆಣ್ಣೆ ಪ್ರವೀಣ್, ಮಧು ಹೋತನಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.
Leave a comment