ಶಿಕಾರಿಪುರ ಲೈವ್:
ಅಡಿಕ ಖೇಣಿದಾರರು ರೈತರ ಮೇಲೆ ನಿಯಮ ಬಾಹಿರ ಷರತ್ತುಗಳನ್ನು ಹೇರುತ್ತಿದ್ದು ಅವರ ವಿರುದ್ಧ ಸರ್ಕಾರ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ರೈತರು ಮಂಗಳವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಅಡಿಕೆ ಖೇಣಿದಾರರು ಸಂಘ ರಚಿಸಿಕೊಂಡಿದ್ದು,ರೈತರ ಅಡಿಕೆ ಖೇಣಿ ಮಾಡುವುದಕ್ಕೆ ನಿಯಮ ರೂಪಿಸಿದ್ದಾರೆ. ಶಿಕಾರಿಪುರ, ಸೊರಬ, ಸಾಗರ ತಾಲ್ಲೂಕಿನಲ್ಲಿ ಆಗಸ್ಟ್.15ರ ನಂತರ ಕಟಾವು ಆರಂಭಿಸಬೇಕು. ರೈತರಿಗೆ 25.000 ರೂಪಾಯಿ ಮಾತ್ರ ಮುಂಗಡ ಹಣ ನೀಡಬೇಕು. ಹಣ್ಣು ಅಡಿಕೆ ತೆಗೆದುಕೊಳ್ಳಬಾರದು. ಒಂದೊಮ್ಮೆ ತೆಗೆದುಕೊಳ್ಳಲೇಬೇಕಾದ ಅನಿವಾರ್ಯತೆ ಸೃಷ್ಟಿಯಾದರೆ ಅರ್ಧ ದರಕ್ಕೆ ಖರೀದಿಸಬೇಕು. ಹೀಗೆ ಹಲವು ಅವೈಜ್ಞಾನಿಕ ನಿಯಮ ರೂಪಿಸಿಕೊಂಡಿದ್ದಾರೆ. ಇವು ರೈತರ ಹಿತಕ್ಕೆ ಮಾರಕವಾಗಿವೆ. ಇಂತಹ ನಿಯಮ ರೂಪಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಅಗ್ರಹಿಸಿದರು.
ರೈತರಾದ ಅಂಬಾರಗೊಪ್ಪ ಶೇಖರಪ್ಪ, ಡಿ.ಎಸ್.ಈಶ್ವರಪ್ಪ, ಎಸ್.ಎಸ್. ರಾಘವೇಂದ್ರ, ಜೆ.ಎಸ್. ಮಂಜುನಾಥ್, ಅಂಬಾರಗೊಪ್ಪ ರಾಜಣ್ಣ, ನಾಗಪ್ಪ, ಜೀನಳ್ಳಿ ದೊಡ್ಡಪ್ಪ, ಜಗದೀಶ್, ಬೆಣ್ಣೆ ಪ್ರವೀಣ್, ಗಿಡ್ಡಪ್ಪ ಮಟೇರ್, ಡಿ.ಡಿ. ಶಿವಕುಮಾರ್, ಈಸೂರು ಸಂತೋಷ್, ಚೊರಡಿ ಪ್ರದೀಪ್, ಅರುಣ್ ಕೊಟ್ಟ, ನಂಜುಂಡಿ, ಸಂದೀಪ, ಚನ್ನಳ್ಳಿ ಪರಶುರಾಮ್, ಗುಡದಪ್ಪ, ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Leave a comment