ಶಿಕಾರಿಪುರ ಲೈವ್:
ಮನುಷ್ಯ ಸಮಾನತೆಯಿಂದ ಬದುಕಲು ಅಂಬೇಡ್ಕರ್ ನೀಡಿದ ಸಂವಿಧಾನ ಸಹಕಾರಿಯಾಗಿದೆ ಎಂದು ಪುರಸಭೆ ಅಧ್ಯಕ್ಷೆ ಸುನಂದಾ ಮಂಜುನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಸೋಮವಾರ ತಾಲ್ಲೂಕು ಆಡಳಿತ, ತಾಲೂಕು ಪಂಚಾಯಿತಿ,ಸಮಾಜ ಕಲ್ಯಾಣ ಇಲಾಖೆ,ಪುರಸಭೆ ಹಾಗೂ ವಿವಿಧ ದಲಿತ ಸಂಘಟನೆಗಳ ಆಶ್ರಯದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು
ಜಗತ್ತನ್ನು ಬೆಳಕಿನ ಕಡೆ ಕರೆದೊಯ್ಯುವ ಶಕ್ತಿ ಡಾ.ಬಿ.ಆರ್. ಅಂಬೇಡ್ಕರ್ ನೀಡಿದ ಸಂವಿಧಾನಕ್ಕೆ ಇದೆ. ಅಸ್ಪುಶ್ರತೆ ನಿವಾರಣೆಗಾಗಿ ಅವರು ಶ್ರಮಿಸಿದ್ದರು. ದಮನಿತರ ಹಾಗೂ ಶೋಷಿತರ ಧ್ವನಿಯಾಗಿದ್ದರು. ಬಲಿ ಕೊಡುವ ಕುರಿಗಳಂತೆ ಬದುಕದೇ ಹುಲಿ ಸಿಂಹದಂತೆ ಬದುಕಬೇಕು ಎಂದಿದ್ದರು.
ನಾವೆಲ್ಲಾ ಉನ್ನತ ಮಟ್ಟಕ್ಕೆ ಬೆಳೆದು ಮುಖ್ಯವಾಹಿನಿಗೆ ಬರಲು ಅಂಬೇಡ್ಕರ್ ಕಾರಣರಾಗಿದ್ದಾರೆ. ಇಂತಹ ಮಹಾನ್ ವ್ಯಕ್ತಿಯು ಸಂವಿಧಾನದ ಮೂಲಕ ನೀಡಿದ ತತ್ವ ವಿಚಾರಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಡಾ. ಅಂಬೇಡ್ಕರ್ ಜೀವನ ಕುರಿತು ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಕೆ.ಎಚ್. ಪುಟ್ಟಪ್ಪ ಉಪ್ಪನ್ಯಾಸ ನೀಡಿದರು.
ಬಾಬು ಜಗಜೀವನ್ ರಾಂ ಜೀವನ ಕುರಿತು ಅಕ್ಷರ ಪಿಯು ಕಾಲೇಜಿನ ಉಪನ್ಯಾಸಕ ವಿನೀತ್ ಉಪನ್ಯಾಸ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ಅಂಬೇಡ್ಕರ್ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ನಂತರ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು
ತಾಲ್ಲೂಕು ಪಂಚಾಯಿತಿ ಇಒ ನಾಗರಾಜ್, ಗ್ರೇಡ್ 2 ತಹಶೀಲ್ದಾರ್ ರವಿಕುಮಾರ್, ಪುರಸಭೆ ಸದಸ್ಯರಾದ ಸುರೇಶ್, ರೂಪಕಲಾ ಹೆಗಡೆ, ಫೈರೋಜಾ ಭಾನು, ಮುಖ್ಯಾಧಿಕಾರಿ ಭರತ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಧುಸೂಧನ್, ಅಹಿಂದ ಅಧ್ಯಕ್ಷ ರಂಗಪ್ಪ, ಮುಖಂಡರಾದ ಗೋಣಿಮಾಲತೇಶ್, ಭಂಡಾರಿ ಮಾಲತೇಶ್, ಉಮೇಶ್ ಮಾರವಳ್ಳಿ, ಎ.ಬಿ. ಸುಧೀರ್, ಬಸವರಾಜಪ್ಪ ರೋಟೆ, ವಕೀಲ ನಿಂಗಪ್ಪ, ಸುರೇಶ್ , ಚುರ್ಚಿಗುಂಡಿ ಜಗದೀಶ್, ತಿಪ್ಪೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ವಿವಿಧ ಇಲಾಖೆ ಪದಾಧಿಕಾರಿಗಳಾದ ರವಿಕುಮಾರ್, ನಾಗೇಶಪ್ಪ, ಉಮೇಶ್, ಕಿರಣ್ ಕುಮಾರ್ ಹರ್ತಿ, ಪ್ರಶಾಂತ್, ದೇನ್ಯಾನಾಯ್ಕ ಉಪಸ್ಥಿತರಿದ್ದರು.
Leave a comment