ಶಿಕಾರಿಪುರ ಲೈವ್:
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ನಡೆದ 2025–26ನೇ ಸಾಲಿನ ಬಜೆಟ್ ಸಭೆಯಲ್ಲಿ 39.17ಲಕ್ಷ ರೂಪಾಯಿ ಉಳಿತಾಯ ಬಜೆಟ್ ಅನ್ನು ಪುರಸಭೆ ಅಧ್ಯಕ್ಷೆ ಸುನಂದಾ ಮಂಜುನಾಥ್ ಮಂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸುನಂದಾ ಮಂಜುನಾಥ್, ‘ಮನೆ ಕಂದಾಯ,ನೀರಿನ ಕಂದಾಯ,ಮಳಿಗೆಗಳ ಬಾಡಿಗೆ, ಇತರೆ ಆದಾಯಗಳು ಹಾಗೂ ಸರ್ಕಾರದ ಅನುದಾನ ಸೇರಿ ಸುಮಾರು 23 ಕೋಟಿ16 ಲಕ್ಷ ರೂಪಾಯಿ ಪುರಸಭೆಗೆ ಆದಾಯ ದೊರೆಯುವ ನಿರೀಕ್ಷೆ ಇದೆ. ಈ ಹಣದಲ್ಲಿ ವಿವಿಧ ಯೋಜನೆಗಳಿಗೆ,ಸಾಮಾಜಿಕ ಕಾರ್ಯಕ್ರಮ ಹಾಗೂ ಆಡಳಿತ ವೆಚ್ಚಗಳಿಗೆ ಸುಮಾರು 22ಕೋಟಿ 76ಲಕ್ಷ ರೂಪಾಯಿ ವ್ಯಯಿಸಿ,39 ಲಕ್ಷದ 17ಸಾವಿರ
ಉಳಿತಾಯ ಮಾಡುವ ಗುರಿ ಹೊಂದಲಾಗಿದ್ದು, ಪಟ್ಟಣದ ಸರ್ವಾಂಗೀಣಾ ಅಭಿವೃದ್ಧಿ ಆದ್ಯತೆ ನೀಡಲಾಗಿದೆ ಎಂದರು.
ಪಟ್ಟಣ ನೈರ್ಮಲೀಕರಣ ಘನತ್ಯಾಜ ನಿರ್ವಹಣೆಗೆ 1.35ಕೋಟಿ, ಕುಡಿಯುವ ನೀರು ಸರಬರಾಜಿಗಾಗಿ 1ಕೋಟಿ72ಲಕ್ಷ, ರಸ್ತೆ ನಿರ್ಮಾಣಕ್ಕೆ 25ಲಕ್ಷ , ಬೀದಿ ದೀಪಗಳ ನಿರ್ವಹಣೆ 1ಕೋಟಿ, ಪುರಸಭೆ ಬಜೆಟ್ ನಲ್ಲಿ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ಸಮುದಾಯ ಭವನ ಹಾಗೂ ಇತರೆ ಕಾರ್ಯಗಳಿಗೆ 15ಲಕ್ಷ ರೂಪಾಯಿ, ಚರಂಡಿಗಳ ನಿರ್ಮಾಣಕ್ಕೆ 40ಲಕ್ಷ,
ಹಸೀರಿಕರಣಕ್ಕೆ ₹15ಲಕ್ಷ, ಶೇ 7.25 ಯೋಜನೆಗೆ 6ಲಕ್ಷ, ಶೇ 5ರ ಯೋಜನೆಗೆ ₹3ಲಕ್ಷ, ಕ್ರೀಡಾ ನಿಧಿಗಾಗಿ ₹1ಲಕ್ಷ, ಉದ್ಯಾನಗಳ ನಿರ್ಮಾಣ ಹಾಗೂ ನಿರ್ವಹಣೆಗೆ 35ಲಕ್ಷ, ಸ್ಮಶಾನ ನಿರ್ಮಾಣ ಹಾಗೂ ಅಭಿವೃದ್ಧಿಗೆ ₹25ಲಕ್ಷ, ಕ್ರೀಡಾ ಪ್ರೋತ್ಸಾಹ ನಿಧಿ ₹1ಲಕ್ಷ, ಪುರಸಭೆ ಕಟ್ಟಡಗಳ ಉನ್ನತೀಕರಣಕ್ಕೆ 34ಲಕ್ಷ ಹಣವನ್ನು ಮೀಸಲಿರಿಸಿದೆ ಎಂದರು.
ಈ ಸಂದರ್ಭದಲ್ಲಿ ಒಟ್ಟು 23ಕೋಟಿ 16 ಲಕ್ಷ ಮೊತ್ತದ ಬಜೆಟ್ ಅನ್ನು ಪುರಸಭೆ ಅಧ್ಯಕ್ಷೆ ಸುನಂದಾ ಮಂಜುನಾಥ್ ಮಂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯರು, ಬಜೆಟ್ ನಲ್ಲಿ ಅನುಮೋದಿಸಿದಂತೆ ಕಾಮಗಾರಿಗಳನ್ನು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಪಟ್ಟಣದ ಸರ್ವಾಂಗೀಣಾ ಅಭಿವೃದ್ಧಿಗೆ ಎಲ್ಲರೂ ಶ್ರಮಿಸೋಣ ಎಂದರು.
ಪುರಸಭೆ ಮುಖ್ಯಾಧಿಕಾರಿ ಭರತ್, ಪುರಸಭೆ ಉಪಾಧ್ಯಕ್ಷೆ ರೂಪ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ ಗುಂಡ, ಸದಸ್ಯರಾದ ಲಕ್ಷ್ಮಿ ಮಹಾಲಿಂಗಪ್ಪ, ರೇಖಾಬಾಯಿ ಮಂಜುನಾಥಸಿಂಗ್, ಗೋಣಿಪ್ರಕಾಶ್ ಉಳ್ಳಿದರ್ಶನ್, ರೂಪಕಲಾ ಹೆಗಡೆ, ರೋಶನ್, ಭದ್ರಾಪುರ ಫಾಲಾಕ್ಷ, ಫೈರೋಜಾ ಭಾನು, ಮೊಹಮದ್ ಸಾಧಿಕ್, ಜೀನಳ್ಳಿ ಪ್ರಶಾಂತ್, ಶ್ವೇತಾ ರವೀಂದ್ರ, ರೇಣುಕಾಸ್ವಾಮಿ, ಸುರೇಶ್, ಕಮಲಮ್ಮ ಹುಲ್ಮಾರ್, ಜಯಶ್ರೀ, ಉಮಾವತಿ, ಡಿ.ಆರ್. ರಾಘವೇಂದ್ರ, ಶ್ರೀಧರ ಕರ್ಕಿ, ನಗರದ ರವಿಕಿರಣ್, ಸುರೇಶ್ ಧಾರಾವಾಡ, ಯು.ಬಿ. ವಿಜಯಕುಮಾರ್,
ಪುರಸಭೆ ವ್ಯವಸ್ಥಾಪಕ ರಾಜ್ ಕುಮಾರ್, ವ್ಯವಸ್ಥಾಪಕರಾದ ರಾಜ್ ಕುಮಾರ್, ಲೆಕ್ಕಿಗಾರರಾದ. ಮೋಹನ್, ಗುಡದಯ್ಯ, ಶಶಿಕಲಾ, ಸಮುದಾಯ ಸಂಘಟನಾಧಿಕಾರಿ ಸುರೇಶ್, ಕಂದಾಯ ಅಧಿಕಾರಿ ಪರಶುರಾಮ್, ಎಂಜಿನಿಯರ್ ಶೇಖರನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
Leave a comment