ಶಿಕಾರಿಪುರ ಲೈವ್:
ಪಟ್ಟಣದಲ್ಲಿ ಸೋಮವಾರ ಮುಸ್ಲಿಂ ಬಾಂಧವರು
ದಾನ ಧರ್ಮದ ಸಂಕೇತವಾದ ರಂಜಾನ್ ಹಬ್ಬವನ್ನು ಶ್ರದ್ಧಾ,ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಿದರು.
ಪಟ್ಟಣದ ವಿವಿಧ ಬಡಾವಣೆಗಳಿಂದ ಬೆಳಿಗ್ಗೆ ಮೆರವಣಿಗೆ ಮೂಲಕ ಹೊರಟ ಸಾವಿರಾರು ಮುಸ್ಲಿಂ ಬಾಂಧವರು ಗಗ್ರಿ ಬಡಾವಣೆಯಲ್ಲಿರುವ ಈದ್ಗಾ ಮೈದಾನದಲ್ಲಿ ಜಮಾವಣೆಗೊಂಡರು. ಇದೇ ಸಂದರ್ಭದಲ್ಲಿ ಅಲ್ಲಾನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆ ನಂತರ ಪರಸ್ಪರ ಹಬ್ಬದ ಶುಭಾಷಯಗಳನ್ನು ಹಂಚಿಕೊಂಡರು.
ಪೋಷಕರೊಂದಿಗೆ ಹೊಸ ಉಡುಪುಗಳನ್ನು ಧರಿಸಿ ಹರ್ಷದಿಂದ ಈದ್ಗಾ ಮೈದಾನಕ್ಕೆ ಆಗಮಿಸಿದ ಪುಟಾಣಿ ಮಕ್ಕಳು ಕೂಡ,ಪರಸ್ಪರ ಸ್ನೇಹಿತರೊಂದಿಗೆ ಹಬ್ಬದ ಶುಭಾಷಯ ಹಂಚಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂದಿತು.
Leave a comment