Home ಕುವೆಂಪು ವಿಚಾರಧಾರೆ ಶ್ರಮಿಕ ವರ್ಗದ ಪರವಾಗಿದ್ದಾವೆ: ಲೇಖಕ ಡಾ.ಎಸ್.ವಿ. ಪುರುಷೋತ್ತಮ್ ಹಾರೋಹಿತ್ತಲು ಅಭಿಪ್ರಾಯ
Homeಪ್ರಮುಖ ಸುದ್ದಿ

ಕುವೆಂಪು ವಿಚಾರಧಾರೆ ಶ್ರಮಿಕ ವರ್ಗದ ಪರವಾಗಿದ್ದಾವೆ: ಲೇಖಕ ಡಾ.ಎಸ್.ವಿ. ಪುರುಷೋತ್ತಮ್ ಹಾರೋಹಿತ್ತಲು ಅಭಿಪ್ರಾಯ

Share
Share

ಶಿಕಾರಿಪುರ ಲೈವ್:
ಕುವೆಂಪು ವಿಚಾರಧಾರೆಗಳು ಶ್ರಮಿಕ ವರ್ಗದ ಪರವಾಗಿದ್ದಾವೆ ಎಂದು ಲೇಖಕ‌ ಡಾ.ಎಸ್.ವಿ. ಪುರುಷೋತ್ತಮ್ ಹಾರೋಹಿತ್ತಲು ಅಭಿಪ್ರಾಯ ವ್ಯಕ್ತಪಡಿಸಿದರು‌.

ಪಟ್ಟಣ ಸಮೀಪದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣದಲ್ಲಿ ಶನಿವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು,ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಹಾಗೂ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಆಶ್ರಯದಲ್ಲಿ ನಡೆದ ಶ್ರೀಮತಿ ದಿ.ಮೈತ್ರಾದೇವಿ ಯಡಿಯೂರಪ್ಪ ದತ್ತಿ ಹಾಗೂ ದಿ.ಎಂ.ಎಸ್. ಮಲ್ಲಪ್ಪ ಮತ್ತು ಎಂ.ಎಸ್. ಭರಮಪ್ಪ ಅವರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕುವೆಂಪು ಸಾಹಿತ್ಯ: ಸಾರ್ವಕಾಲಿಕ ಮೌಲ್ಯಗಳು ವಿಷಯ ಕುರಿತು ಆವರು ಮಾತನಾಡಿದರು.

ಕುವೆಂಪು ಅವರಿಗೆ ದುಡಿಯುವ ವರ್ಗದ ಜನರ ಕಷ್ಟ ಕುವೆಂಪು ಅವರಿಗೆ ಗೊತ್ತಿತ್ತು. ಆದ್ದರಿಮಕುವೆಂಪು ಆದರ್ಶದ ಸಾಹಿತಿಯಾಗಿದ್ದಾರೆ. ಕುವೆಂಪು ಪ್ರಕೃತಿಯ ಆರಾಧಕರಾಗಿದ್ದರು. ಸಮಬಾಳು ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ತತ್ವದ ಪರವಾಗಿದ್ದರು. ಸಮಾಜ ಹಾಗೂ ಸಾಹಿತ್ಯ ಕ್ಷೇತ್ರದ ಮೇಲೆ ಕುವೆಂಪು ಅವರ ಪ್ರಭಾವವಿದೆ. ಕುವೆಂಪು ಸಾಹಿತ್ಯವನ್ನು ನೀವು ಓದಬೇಕು. ಕುವೆಂಪು ಸಾಹಿತ್ಯದ ಮೌಲ್ಯಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದರು.

ಹಾಸ್ಯ ಸಾಹಿತ್ಯ ವಿಷಯ ಕುರಿತು ಮಾತನಾಡಿದ ಜೂನಿಯರ್ ಕಾಲೇಜ್ ಪ್ರೌಢಶಾಲಾ ವಿಭಾಗದ ಶಿಕ್ಷಕ ನಾಗರಾಜ್, ಕನ್ನಡ ಸಾಹಿತ್ಯದಲ್ಲಿ ಹಾಸ್ಯ ಸಾಹಿತ್ಯ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಪಂಪನ ಮಹಾಕಾವ್ಯದಲ್ಲಿ ಹಾಸ್ಯ ನೋಡುತ್ತೇವೆ. ಆಧುನಿಕ ಕಾಲದಲ್ಲೂ ಹಾಸ್ಯಸಾಹಿತ್ಯದ ಬಗ್ಗೆ ಹಲವು ಲೇಖಕರು ಬರೆದಿದ್ದಾರೆ. ಭಾರವಾದ ಬದುಕು ಹಗುರವಾಗಲು ಹಾಸ್ಯಬೇಕು. ಇಂದಿನ ಒತ್ತಡದ ಜೀವನದಲ್ಲಿ ಹಾಸ್ಯ ಪ್ರಮುಖ ಪಾತ್ರ ವಹಿಸುತ್ತದೆ. ಹಾಸ್ಯ ನಮ್ಮ ಆಯಸ್ಸನ್ನು ಹೆಚ್ಚು ಮಾಡುತ್ತದೆ. ನಗು ನಗುತ್ತಾ ನಾವು ಜೀವನ ಸಾಗಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಎಚ್.ಎಸ್. ರಘು ಮಾತನಾಡಿ, ಕುವೆಂಪು ನಾಡಿಗೆ ವಿಶ್ವಮಾನವ ಸಂದೇಶವನ್ನು ಸಾರಿದ್ದರು. ಮನುಜ ಮತ ವಿಶ್ವಪಥ ಎಂದಿದ್ದರು. ಯಾವುದೇ ಒಂದು ಜಾತಿ ಧರ್ಮಕ್ಕೆ ಪರ ಇರದೇ ಸಮಾಜಕ್ಕೆ ಮಾನವೀಯತೆಯ ಸಂದೇಶ ಸಾರಿದ್ದರು. ಕುವೆಂಪು ಅವರ ತತ್ವ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕುವೆಂಪು ಸೇರಿದಂತೆ ಹಲವು ಸಾಹಿತಿಗಳ ಪುಸ್ತಕಗಳನ್ನು ನೀವು ಓದಬೇಕು.‌ ಭವಿಷ್ಯದ ಶಿಕ್ಷಕರಾಗುವ ನೀವು ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಬಗ್ಗೆ ಅಭಿರುಚಿ ಮೂಡಿಸಬೇಕು. ಕನ್ನಡ ಭಾಷೆ ಬಗ್ಗೆ ಅಭಿಮಾನ ಮೂಡಿಸಬೇಕು. ಕನ್ನಡ ಭಾಷೆ ಬಳಸುವ ಮೂಲಕ‌ ಭಾಷೆ ಉಳಿಸಬೇಕು ಎಂದು ಸಲಹೆ ನೀಡಿದ ಅವರು, ಮಾಜಿ ಮುಖ್ಯ ಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಸಹಕಾರದಿಂದ ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಸಾಹಿತ್ಯ ಭವನ ನಿರ್ಮಾಣವಾಗುತ್ತಿದೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮವನ್ನು ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ಅಧ್ಯಕ್ಷ ಎಂ.ಬಿ ಶಿವಕುಮಾರ್ ಉದ್ಘಾಟಿಸಿದರು.

ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಆಡಳಿತ ಪ್ರತಿನಿಧಿ ಹಾಗೂ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲ ಡಾ‌.ಜಿ.ಎಸ್. ಶಿವಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಘಟನಾ ಕಾರ್ಯದರ್ಶಿ ಕೆ.ಎಸ್. ಹುಚ್ಚರಾಯಪ್ಪ, ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಉಪನ್ಯಾಸಕರು, ಸಿಬ್ಬಂದಿ ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Home

ಸಂವಿಧಾನ ಆಶಯಕ್ಕೆ ದಕ್ಕೆಯಾಗದಂತೆ ಜೀವನ ನಡೆಸಿ: ತಹಶೀಲ್ದಾರ್ ಮಲ್ಲೇಶ್ .ಬಿ. ಪೂಜಾರ್ ಸಲಹೆ

ಶಿಕಾರಿಪುರ ಲೈವ್: ಸಂವಿಧಾನದ ಆಶಯಕ್ಕೆ ದಕ್ಕೆಯಾಗದಂತೆ ನಾವು ಜೀವನ ನಡೆಸಬೇಕು ಎಂದು ತಹಶೀಲ್ದಾರ್ ಮಲ್ಲೇಶ್ ಬಿ.ಪೂಜಾರ್...

Home

ರೈತರ ಸಂಕಷ್ಟಕೆ ಅಧಿಕಾರಿಗಳು ಸ್ಪಂದಿಸಬೇಕು: ಶಾಸಕ ಬಿ.ವೈ. ವಿಜಯೇಂದ್ರ ಸೂಚನೆ

ಶಿಕಾರಿಪುರ ಲೈವ್: ರೈತರ ಕಷ್ಟಕ್ಕೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಶಾಸಕ‌ ಬಿ.ವೈ. ವಿಜಯೇಂದ್ರ ಸೂಚಿಸಿದರು. ಪಟ್ಟಣದ...

Home

ನಿರಂತರ ಮಳೆ ನಾಳೆ(ಶನಿವಾರ) ಶಿಕಾರಿಪುರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಶಿಕಾರಿಪುರ ಲೈವ್: ತಾಲೂಕಿನಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆ ದಿನಾಂಕ 26/7/2025(ಶನಿವಾರ) ಶಿಕಾರಿಪುರ ತಾಲ್ಲೂಕಿನ ಎಲ್ಲಾ...

Home

ನಿರಂತರ ಮಳೆ ಶಿಕಾರಿಪುರ ತಾಲೂಕಿನ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಣೆ

ಶಿಕಾರಿಪುರ ಲೈವ್: ತಾಲೂಕಿನಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಇಂದು ದಿನಾಂಕ 25/7/2025(ಶುಕ್ರವಾರ) ಶಿಕಾರಿಪುರ ತಾಲ್ಲೂಕಿನ ಎಲ್ಲಾ...