ಶಿಕಾರಿಪುರ ಲೈವ್:
ಪಟ್ಟಣದ ಖಾಸಗಿ ಬಸ್ ನಿಲ್ದಾಣ ಸಮೀಪದ ನಟ ಪುನೀತ್ ರಾಜ್ ಕುಮಾರ್ ರಸ್ತೆಯಲ್ಲಿ ಪುನೀತ್ ಭಾವಚಿತ್ರದ ವಾಲ್ ಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಸೋಮವಾರ ಪುನೀತ್ ರಾಜ್ ಕುಮಾರ್ 50ನೇ ವರ್ಷದ ಜನ್ಮದಿನವನ್ನು ಅಭಿಮಾನಿಗಳು ಆಚರಿಸಿದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಾದ ರವೀಂದ್ರನಾಯ್ಕ ಹಾಗೂ ರೇವಣಸಿದ್ದಯ್ಯ ಹಿರೇಮಠ್ ಮಾತನಾಡಿ, ಅಪ್ಪುರವರ ಸಿನಿಮಾಗಳು ಯುವಕರಿಗೆ ಮಾದರಿಯಾಗಿವೆ. ಸಮಾಜಕ್ಕೆ ಸಂದೇಶ ನೀಡುವ ಚಿತ್ರಗಳಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದಾರೆ. ಪುನೀತ್ ನಮ್ಮ ಅರಣ್ಯ ಇಲಾಖೆಯ ರಾಯಭಾರಿಯಾಗಿದ್ದರು. ನಾವು ಬೇರೆ ದೇಶದ ಅರಣ್ಯಗಳ ಕುರಿತು ಮಾತನಾಡುತ್ತೇವೆ. ಆದರೆ ಗಂಧದಗುಡಿ ಸಿನಿಮಾ ಮೂಲಕ ಕಾಡು ಮತ್ತು ವನ್ಯ ಜೀವಿಗಳ ಉಳಿವಿನ ಕುರಿತು ಜಾಗೃತಿ ಮೂಡಿಸಿದರು. ಅಪ್ಪು ತತ್ವ ಆದರ್ಶಗಳನ್ನು ಯುವ ಜನತೆ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು. ಶಾಲಾ ಮಕ್ಕಳಿಗೆ ಸಸಿ ವಿತರಿಸಲಾಯಿತು.
ಪುನೀತ್ ರಾಜ್ ಕುಮಾರ್ ಅಭಿಮಾನಿಗಳಾದ ವೈಭವ್ ಬಸವರಾಜ್, ಆರ್. ರಾಜಕುಮಾರ್, ಸುಬ್ರಮಣ್ಯ ರೇವಣಕರ್, ರವಿ, ಸಲೀಂ, ಮಧು, ಗಿಡ್ಡಪ್ಪ, ಕಾಳಿಂಗ ರಾವ್,ಮಂಜುನಾಥ್, ಯೋಗೇಶ್ ಮತ್ತಿತರರು ಉಪಸ್ಥಿತರಿದ್ದರು.
Leave a comment