ಶಿಕಾರಿಪುರ ಲೈವ್ :
ಎ ಮತ್ತು ಬಿ ಖಾತೆ ಸೌಲಭ್ಯವನ್ನು ಪಟ್ಟಣದ ನಿವಾಸಿಗಳಿಗೆ ಶೀಘ್ರವಾಗಿ ತಲುಪಿಸುವ ಜವಾಬ್ದಾರಿ ಪುರಸಭೆ ಅಧಿಕಾರಿಗಳು ಹಾಗೂ ಪುರಸಭೆ ಸದಸ್ಯರ ಮೇಲಿದೆ ಎಂದು ಬಿ ವೈ ವಿಜಯೇಂದ್ರ ಸೂಚಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ
ಎ ಮತ್ತು ಬಿ ಖಾತೆ ಸೌಲಭ್ಯ ಕುರಿತು ನಡೆದ ಪುರಸಭೆ ಅಧಿಕಾರಿಗಳು ಹಾಗೂ ಪುರಸಭೆ ಸದಸ್ಯರ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಹಲವು ವರ್ಷಗಳಿಂದ ಈ ಸ್ವತ್ತು ನೀಡುವ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಎ ಮತ್ತು ಬಿ ಖಾತೆ ನೀಡುವ ಸೌಲಭ್ಯ ಪೂರಕವಾಗಲಿದೆ.
ಅನಗತ್ಯವಾಗಿ ದಾಖಲೆಗಳನ್ನು ಕೇಳಬಾರದು. ಎ ಮತ್ತು ಬಿ ಖಾತೆಯನ್ನು ನೀಡಲು ಪುರಸಭೆಗೆ ಅಲೆದಾಡಿಸದೆ ಶೀಘ್ರವಾಗಿ ನೀಡಬೇಕು. 2004 ರ ನಂತರದ ಇಸಿಯನ್ನು ಪಡೆದು ಖಾತೆ ನೀಡಲು ಮುಂದಾಗಬೇಕು. ಸಾಧ್ಯವಾದಷ್ಟು ‘ಎ’ ಖಾತೆ ನೀಡಲು ಶ್ರಮಹಾಕಬೇಕು. ಈ ಸೌಲಭ್ಯ ಒದಗಿಸಲು ಮೇ 10 ಕೊನೆಯ ದಿನಾಂಕವಾಗಿದ್ದು ಆ ದಿನಾಂಕದವರೆಗೆ ಕಾಯುವ ಬದಲು ಏಪ್ರಿಲ್ ಅಂತ್ಯದಲ್ಲಿಯೇ ಈ ಖಾತೆ ನೀಡುವ ಸೌಲಭ್ಯವನ್ನು ಜನರಿಗೆ ತಲುಪಿಸಬೇಕು ಎಂದು ಸೂಚಿಸಿದರು.
ಖಾತೆ ಮಾಡಿಸಲು ಆಗಮಿಸುವ ಜನರಿಗೆ ಸಮರ್ಪಕವಾಗಿ ಮಾಹಿತಿ ನೀಡಬೇಕು ಎ ಮತ್ತು ಬಿ ಖಾತೆ ಮಾಡಲು ಪೂರಕವಾಗುವಂತೆ ಕಚೇರಿಯಲ್ಲಿ ಹೆಚ್ಚಿನ ಕೌಂಟರ್ ಗಳನ್ನು ಆರಂಭಿಸಬೇಕು. ಹೊರಗುತ್ತಿಗೆ ಆಧಾರದ ಮೇಲೆ ಡಾಟಾ ಆಪರೇಟರ್ ಗಳನ್ನು ನಿಯೋಜನೆ ಮಾಡಿಕೊಳ್ಳಬೇಕು, ಅಧಿಕಾರಿಗಳು ಎ ಮತ್ತು ಬಿ ಖಾತೆ ಸೌಲಭ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಹಾಗೂ ಹೆಚ್ಚು ಪ್ರಚಾರ ಮಾಡಬೇಕು. ಪುರಸಭೆ ಸದಸ್ಯರು ತಮ್ಮ ವಾರ್ಡ್ ಗಳಲ್ಲಿ ಮನೆ ಮನೆಗೆ ತೆರಳಿ ಈ ಬಗ್ಗೆ ಮಾಹಿತಿ ನೀಡಿ ಖಾತೆ ಮಾಡಿಸಲು ಮುಂದಾಗಬೇಕು. ಈ ಸೌಲಭ್ಯವನ್ನು ಜನರು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಬೇಕು ಎಂದು ಸೂಚಿಸಿದರು
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ,ಉಪನೊಂದಣಾಧಿಕಾರಿ ದಿವ್ಯಶ್ರೀ, ಪುರಸಭೆ ಮುಖ್ಯಾಧಿಕಾರಿ ಭರತ್, ಪುರಸಭೆ ಉಪಾಧ್ಯಕ್ಷೆ ರೂಪ ಪಾರಿವಾಳ ಮಂಜುನಾಥ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ ಗುಂಡ, ಬಿಜೆಪಿ ಮುಖಂಡ ಭದ್ರಾಪುರ ಹಾಲಪ್ಪ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸಂಕ್ಲಾಪುರ ಹನುಮಂತಪ್ಪ, ಪುರಸಭೆ ಸದಸ್ಯರಾದ ಲಕ್ಷ್ಮಿ ಮಹಾಲಿಂಗಪ್ಪ, ರೇಖಾಬಾಯಿ ಮಂಜುನಾಥ್ ಸಿಂಗ್, ಸುನಂದ ಮಂಜುನಾಥ್, ಸುರೇಶ್, ಜೀನಳ್ಳಿ ಪ್ರಶಾಂತ್, ರೇಣುಕಸ್ವಾಮಿ, ಪಾಲಾಕ್ಷ , ಮೊಹಮದ್ ಸಾಧಿಕ್, ಉಮಾವತಿ, ವ್ಯವಸ್ಥಾಪಕ ರಾಜ್ ಕುಮಾರ್, ಆರ್.ಒ. ಪರಶುರಾಮ್ ಮತ್ತಿತರರು ಉಪಸ್ಥಿತರಿದ್ದರು.
Leave a comment