ಶಿಕಾರಿಪುರ ಲೈವ್:
ಮಹಾಶಿವರಾತ್ರಿ ಮನೊರಂಜನೆಯ ಹಬ್ಬವಲ್ಲ,
ಶಿವನನ್ನು ಧ್ಯಾನ ಮಾಡುವ ಹಬ್ಬವಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ನಡೆದ ಮಹಾಶಿವರಾತ್ರಿ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಸಂಸ್ಕೃತಿಯಲ್ಲಿ ಮಹಾಶಿವರಾತ್ರಿ ಮಹತ್ವದ ಹಬ್ಬವಾಗಿದೆ. ಶಿವರಾತ್ರಿ ಭಕ್ತಿಯ ರಾತ್ರಿಯಾಗಬೇಕು. ಶಿವನನ್ನು ಧ್ಯಾನ ಮಾಡುವುದೇ ಶಿವರಾತ್ರಿ ಹಬ್ಬದ ಮಹತ್ವವಾಗಿದೆ. ಶಿವನನ್ನು ಧ್ಯಾನಿಸುವ ಮೂಲಕ ಶಿವನ ಕೃಪೆಗೆ ಪಾತ್ರರಾಗಬೇಕು.
ಮಹಾಶಿವರಾತ್ರಿ ಹಬ್ಬವನ್ನು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದವರು ವಿಶ್ವದಾದ್ಯಂತ ವಿಶೇಷವಾಗಿ ಆಚರಿಸುತ್ತಾರೆ. ಜನರಲ್ಲಿ ಆತ್ಮ ಜಾಗೃತಿ, ಮೌಲ್ಯ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ
ಸಂಚಾಲಕರಾದ ಸ್ನೇಹಕ್ಕ, ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕ ಅಧ್ಯಕ್ಷ ಎ.ಬಿ. ಸುಧೀರ್, ನಿವೃತ್ತ ಪಿಎಸ್ಐ ಕೋಮಲಾಚಾರ್, ವೀಣಾ,ಮಂಜುಳಾ, ಮಾಲಾ ಮತ್ತಿತರರು ಉಪಸ್ಥಿತರಿದ್ದರು.
Leave a comment