Home ಶಿಕಾರಿಪುರ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ವಿಶ್ವಮಾತೃಭಾಷಾ ದಿನಾಚರಣೆ ಕಾರ್ಯಕ್ರಮ
Homeಪ್ರಮುಖ ಸುದ್ದಿ

ಶಿಕಾರಿಪುರ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ವಿಶ್ವಮಾತೃಭಾಷಾ ದಿನಾಚರಣೆ ಕಾರ್ಯಕ್ರಮ

Share
Share

ಶಿಕಾರಿಪುರ ಲೈವ್:
ಪಟ್ಟಣದ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ತಾಲ್ಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ‌ ವೇದಿಕೆ, ತಾಲ್ಲೂಕು ಜಾನಪದ ಪರಿಷತ್ ಹಾಗೂ ಬಾಪೂಜಿ ವಿದ್ಯಾಸಂಸ್ಥೆ ಆಶ್ರಯದಲ್ಲಿ ನಡೆದ ವಿಶ್ವ ಮಾತೃಭಾಷೆ ದಿನಾಚರಣೆ ಕಾರ್ಯಕ್ರಮ ನಡೆಯಿತು‌.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಾಪೂಜಿ ವಿದ್ಯಾಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಹಾಗೂ ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷರಾದ ಬಿ. ಪಾಪಯ್ಯ ಬಿ.ಪಾಪಯ್ಯ, ಮಾತೃಭಾಷೆ ಕನ್ನಡ ಉಳಿಸಲು ಕನ್ನಡ ಭಾಷೆಯನ್ನು ಹೆಚ್ಚು ಬಳಸಬೇಕು. ಅನ್ನಭಾಷಿಕರೊಂದಿಗೆ ನಮ್ಮ ಕನ್ನಡ ಭಾಷೆಯಲ್ಲಿಯೇ ಮಾತನಾಡಬೇಕು ಹಾಗೂ ಅವರಿಗೆ ಭಾಷೆಯನ್ನು ಕಲಿಸಬೇಕು. ಮಾತೃಭಾಷೆಯನ್ನು ಪ್ರೀತಿಸಬೇಕು ಹಾಗೂ ಗೌರವಿಸಬೇಕು. ಅನ್ಯಭಾಷೆ ವ್ಯಾಮೋಹ ತೊರೆದು ಮಾತೃಭಾಷೆ ಕನ್ನಡ ಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಾತೃಭಾಷಾ ದಿನಾಚರಣೆ ಕುರಿತು ಸಾಲೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಪ್ರಕಾಶ್ ಮಾತ‌ನಾಡಿ, ಮಾತೃಭಾಷೆ ಉಳಿವಿಗಾಗಿ ವಿಶ್ವಮಾತೃಭಾಷೆ ದಿನಾಚರಣೆ ಆಚರಿಸಲಾಗುತ್ತಿದೆ. ಭಾಷೆ ಉಳಿಯುವುದರಿಂದ ಜ್ಞಾನ ಹಾಗೂ ಸಂಸ್ಕೃತಿ‌ ಉಳಿಯುತ್ತದೆ. ನಮ್ಮ ನಡೆ ನುಡಿ ಹಾಗೂ ಬದುಕು ಭಾಷೆಯಾಗಿದೆ. ಮಾತೃಭಾಷೆಯಲ್ಲಿ ಪ್ರಾಥಮಿಕ‌ ಶಿಕ್ಷಣ ಪಡೆಯಬೇಕು. ಭಾಷೆ ಕಟ್ಟುವುದು ನಿರಂತರ ಕೆಲಸವಾಗಿದೆ. ಮಾತೃಭಾಷೆ ಕಲಿಕೆ ಕ್ರೀಯಾಶೀಲತೆ ಹಾಗೂ‌ ಸೃಜನಾಶೀಲತೆಯನ್ನು ಹೆಚ್ಚಿಸುತ್ತದೆ ಎಂದರು‌.

ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್. ರಘು ಮಾತನಾಡಿ, ಈ ನಾಡಿನಲ್ಲಿ ಜನ್ಮತಾಳಿದ ಪ್ರತಿಯೊಬ್ಬರು ಕನ್ನಡ ಭಾಷೆ ಬಗ್ಗೆ ಅಭಿಮಾನ ಹೊಂದಬೇಕು. ವಿದ್ಯಾರ್ಥಿ ಜೀವನದಿಂದಲೇ ನೀವು ಸಾಹಿತ್ಯ ಓದುವ ಮತ್ತು ಬರೆಯುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಕವಿಗಳಾಗಿ ಲೇಖಕರಾಗಿ ಹೊರಹೊಮ್ಮುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಬೇಕು. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದ್ದು,ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದರು.

ತಾಲ್ಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಎಸ್. ಹುಚ್ರಾಯಪ್ಪ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಲ್. ರಾಜು, ಬಾಪೂಜಿ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಪವಿತ್ರಾ, ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಮುಸ್ತಾಫ, ಪ್ರೌಢಶಾಲೆ ಮುಖ್ಯೋಪಾಧ್ಯಾಯ ರಾಘವೇಂದ್ರ ಕುಲಕರ್ಣಿ, ಉಪನ್ಯಾಸಕಿ ಮಹಿತಾ ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
ಪ್ರಮುಖ ಸುದ್ದಿ

ಸಂಭ್ರಮದಿಂದ ಹೋಳಿಹಬ್ಬ ಆಚರಿಸಿದ ಯುವ ಸಮೂಹ

ಶಿಕಾರಿಪುರ ಲೈವ್: ಪರಸ್ಪರ ಬಣ್ಣ ಹಚ್ಚುವ ಮೂಲಕ ಪಟ್ಟಣದ ಜನತೆ ಹೋಳಿ ಹಬ್ಬವನ್ನು ಶುಕ್ರವಾರ ಸಡಗರ...

Home

ಶಿಕಾರಿಪುರಕ್ಕೆ ಗೋರ್ ಬಂಜಾರ್ ಜನಜಾಗೃತಿ ರಥಯಾತ್ರೆ ಅದ್ಧೂರಿ ಸ್ವಾಗತ

ಶಿಕಾರಿಪುರ ಲೈವ್: ಬಂಜಾರ ಸಮುದಾಯದ ಹಕ್ಕು ಪ್ರಗತಿ ಪರಿವರ್ತನೆಗಾಗಿ ಆಯೋಜಿಸಿರುವ ಗೋರ್ ಬಂಜಾರ ಜನಜಾಗೃತಿ ಸೇವಾ...

Homeಪ್ರಮುಖ ಸುದ್ದಿ

ಸಮಾಜಕ್ಕಾಗಿ ಕೊಡುಗೆ ನೀಡುವ ಮನೋಭಾವ ಬೆಳೆಸಿಕೊಳ್ಳಿ: ಮಾಳವಿಕಾ ಅವಿನಾಶ್ ಸಲಹೆ

ಶಿಕಾರಿಪುರ ಲೈವ್: ಮಹಿಳೆಯರು ಸಮಾಜ ಮುಖಿಯಾಗಿ ಕೆಲಸ ಮಾಡುವ ಮೂಲಕ ಸಮಾಜಕ್ಕಾಗಿ ಕೊಡುಗೆ ನೀಡುವ ಮನೋಭಾವ...

Home

ನಾಳೆ ಶಿಕಾರಿಪುರಕ್ಕೆ ಗೋರ್ ಬಂಜಾರ್ ಜನಜಾಗೃತಿ ರಥಯಾತ್ರೆ

ಶಿಕಾರಿಪುರ ಲೈವ್: ಗೋರ್ ಬಂಜಾರ್ ಜನಜಾಗೃತಿ ರಥಯಾತ್ರೆ ಮಾರ್ಚ್ 8ರಂದು ಮಧ್ಯಾಹ್ನ12ಗಂಟೆಗೆ ಶಿಕಾರಿಪುರ ಪಟ್ಟಣಕ್ಕೆ ಆಗಮಿಸಲಿದ್ದು...