Home ಮೈಲಾರಲಿಂಗೇಶ್ವರ ದೇವರ ಧಾರ್ಮಿಕ ಕಾರ್ಯಕ್ರಮ ಗಟ್ ಪರವು
Homeಪ್ರಮುಖ ಸುದ್ದಿ

ಮೈಲಾರಲಿಂಗೇಶ್ವರ ದೇವರ ಧಾರ್ಮಿಕ ಕಾರ್ಯಕ್ರಮ ಗಟ್ ಪರವು

Share
Share

ಶಿಕಾರಿಪುರ ಲೈವ್:
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಗ್ರಾಮದಲ್ಲಿ ನಡೆದ ಮೈಲಾರಲಿಂಗೇಶ್ವರ ದೇವರ ಕಾರ್ಣಿಕೋತ್ಸವ ಪ್ರಯುಕ್ತ ಮೈಲಾರಲಿಂಗೇಶ್ವರ ದೇವರ ಭಕ್ತರು ಹಾಗೂ ಗೊರವಯ್ಯನವರು ಸಂಪ್ರದಾಯದಂತೆ ಪಟ್ಟಣದ ಮಾಸೂರು ರಸ್ತೆಯಲ್ಲಿರುವ ಶಿಭಾರ ಕಟ್ಟೆಯಲ್ಲಿ ಬುಧವಾರ ಧಾರ್ಮಿಕ ಕಾರ್ಯಕ್ರಮ ಗಟ್‌ಪರವು ನಡೆಸಿದರು.

ಸಂಜೆ ಗೊರವಯ್ಯನವರು ಹಾಗೂ ದೇವರು ಹೊತ್ತ ಮಹಿಳೆಯರ ನೇತೃತ್ವದಲ್ಲಿ ಈ ಧಾರ್ಮಿಕ ಕಾರ್ಯಕ್ರಮ ನಡೆದವು. ಮಹಿಳೆಯರು ಮಕ್ಕಳು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಭಕ್ತರು ಶಿಭಾರಕಟ್ಟೆ ಬಳಿ ಜಮಾಯಿಸಿ, ತಮ್ಮ ಮನೆಯಿಂದ ತಯಾರಿಸಿಕೊಂಡು ಬಂದಿದ್ದ ತಿನಿಸುಗಳಿಂದ ನೈವೆದ್ಯ ತಯಾರಿಸಿ ಮೈಲಾರಲಿಂಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಅರ್ಪಿಸಿದರು. ವಿಶೇಷ ಪೂಜೆ ಹಿನ್ನೆಲೆ ಶಿಭಾರಕಟ್ಟೆಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು.

ಗೊರವಯ್ಯನವರು ಬಾಳೆಹಣ್ಣು ಸಕ್ಕರೆ ತುಪ್ಪ ಹಾಲು ಬೆರೆಸಿ,ಹಣ್ಣು ತುಪ್ಪದ ನೈವೆದ್ಯ ಮಾಡಿ ಭಕ್ತರಿಗೆ ವಿತರಿಸಿದರು. ಈ ಸಂದರ್ಭದಲ್ಲಿ ನೆರೆದಿದ್ದ ಭಕ್ತರು ಮೈಲಾರಲಿಂಗೇಶ್ವರ ದೇವರಿಗೆ ಏಳುಕೋಟಿ ಏಳುಕೋಟಿ–ಚಾಂಗ್‌ ಬಲೋ ಎಂದು ಭಕ್ತಿಯಿಂದ ಜಯಘೋಷವನ್ನು ಹಾಕುತ್ತಿದ್ದರು. ಶಿಭಾರದಲ್ಲಿ ಧಾರ್ಮಿಕ ಕಾರ್ಯ ಗಟ್ ಪರವು ಮುಗಿದ ನಂತರ ಶಿಬಾರಕಟ್ಟೆಯಿಂದ ಗಿಡ್ಡಯ್ಯ ದೇವಸ್ಥಾನದವರೆಗೂ ಮೆರವಣಿಗೆ ಹೊರಟ ಗೊರವಯ್ಯನವರು,ಈ ಸಂದರ್ಭದಲ್ಲಿ ಭಕ್ತರು ತಮ್ಮ ಮನೆ ಮುಂದೆ ನೀಡುವ ಬಾಳೆಹಣ್ಣು ಸಕ್ಕರೆ ತುಪ್ಪ ಹಾಲು ತೆಗೆದುಕೊಂಡು ಹಣ್ಣು ತುಪ್ಪದ ನೈವೆದ್ಯ ಮಾಡಿ ಭಕ್ತರಿಗೆ ವಿತರಿಸಿದರು. ನಂತರ ಗಿಡ್ಡೆಶ್ವರ ದೇವಸ್ಥಾನದಲ್ಲಿ ಗೊರವಯ್ಯನವರು ವಿಶೇಷ ಪೂಜೆ ಸಲ್ಲಿಸಿದರು.

Share

Leave a comment

Leave a Reply

Your email address will not be published. Required fields are marked *

Related Articles
ಪ್ರಮುಖ ಸುದ್ದಿ

ಸಂಭ್ರಮದಿಂದ ಹೋಳಿಹಬ್ಬ ಆಚರಿಸಿದ ಯುವ ಸಮೂಹ

ಶಿಕಾರಿಪುರ ಲೈವ್: ಪರಸ್ಪರ ಬಣ್ಣ ಹಚ್ಚುವ ಮೂಲಕ ಪಟ್ಟಣದ ಜನತೆ ಹೋಳಿ ಹಬ್ಬವನ್ನು ಶುಕ್ರವಾರ ಸಡಗರ...

Home

ಶಿಕಾರಿಪುರಕ್ಕೆ ಗೋರ್ ಬಂಜಾರ್ ಜನಜಾಗೃತಿ ರಥಯಾತ್ರೆ ಅದ್ಧೂರಿ ಸ್ವಾಗತ

ಶಿಕಾರಿಪುರ ಲೈವ್: ಬಂಜಾರ ಸಮುದಾಯದ ಹಕ್ಕು ಪ್ರಗತಿ ಪರಿವರ್ತನೆಗಾಗಿ ಆಯೋಜಿಸಿರುವ ಗೋರ್ ಬಂಜಾರ ಜನಜಾಗೃತಿ ಸೇವಾ...

Homeಪ್ರಮುಖ ಸುದ್ದಿ

ಸಮಾಜಕ್ಕಾಗಿ ಕೊಡುಗೆ ನೀಡುವ ಮನೋಭಾವ ಬೆಳೆಸಿಕೊಳ್ಳಿ: ಮಾಳವಿಕಾ ಅವಿನಾಶ್ ಸಲಹೆ

ಶಿಕಾರಿಪುರ ಲೈವ್: ಮಹಿಳೆಯರು ಸಮಾಜ ಮುಖಿಯಾಗಿ ಕೆಲಸ ಮಾಡುವ ಮೂಲಕ ಸಮಾಜಕ್ಕಾಗಿ ಕೊಡುಗೆ ನೀಡುವ ಮನೋಭಾವ...

Home

ನಾಳೆ ಶಿಕಾರಿಪುರಕ್ಕೆ ಗೋರ್ ಬಂಜಾರ್ ಜನಜಾಗೃತಿ ರಥಯಾತ್ರೆ

ಶಿಕಾರಿಪುರ ಲೈವ್: ಗೋರ್ ಬಂಜಾರ್ ಜನಜಾಗೃತಿ ರಥಯಾತ್ರೆ ಮಾರ್ಚ್ 8ರಂದು ಮಧ್ಯಾಹ್ನ12ಗಂಟೆಗೆ ಶಿಕಾರಿಪುರ ಪಟ್ಟಣಕ್ಕೆ ಆಗಮಿಸಲಿದ್ದು...