Home ಪ್ರಮುಖ ಸುದ್ದಿ ಸಮಾನತೆಯ ಬದುಕಿಗೆ ಸಂತ ಸೇವಾಲಾಲ್ ದಾರಿ ತೋರಿಸಿದ್ದರು
ಪ್ರಮುಖ ಸುದ್ದಿ

ಸಮಾನತೆಯ ಬದುಕಿಗೆ ಸಂತ ಸೇವಾಲಾಲ್ ದಾರಿ ತೋರಿಸಿದ್ದರು

Share
Share

ಶಿಕಾರಿಪುರ ಲೈವ್:
ಸಂತ ಸೇವಾಲಾಲ್ ಮಹಾರಾಜರು ಸರಿಸಮಾನತೆಯ ಬದುಕಿಗೆ ದಾರಿ ತೋರಿಸಿದ್ದರು ಎಂದು ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ.ರವಿ ಹೇಳಿದರು.

 

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ತಾಲೂಕು ಆಡಳಿತ ಹಾಗೂ ತಾಲೂಕು ಬಂಜಾರ ಸಮಾಜ ಆಯೋಜಿಸಿದ್ದ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಕಾರ್ಯಕ್ರಮವನ್ನು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಂಜಾರ ಸಮಾಜ ಹರಪ್ಪ ಸಂಸ್ಕೃತಿಯಷ್ಟು ಐತಿಹಾಸಿಕ ಹಿನ್ನೆಲೆ ಹೊಂದಿದೆ. ಬಂಜಾರ ಸಮಾಜ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದು,ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿತ್ರು. ಗೆರಿಲ್ಲಾ ಯುದ್ದ ತಂತ್ರಗಾರಿಕೆಯಲ್ಲಿ ಬಂಜಾರ ಸಮಾಜದ ಪಾತ್ರವಿದೆ. ಬಂಜಾರ ಸಮುದಾಯದ ಸಂತಸೇವಾಲಾಲ್ ಸಾಮಾನ್ಯ ವ್ಯಕ್ತಿ ಯಾಗಿರಲಿಲ್ಲ ಅವರು ನಾಯಕರಾಗಿದ್ದರು. ಬ್ರಿಟೀಷರ ವಿರುದ್ದ ಹೋರಾಟ ನಡೆಸಿದ್ದರು. ಸೇವಾಲಾಲ್ ಅವತಾರ ಪುರುಷರಾಗಿದ್ದರು. ಸಮಾಜದ ಜನರಿಗೆ ಶಿಕ್ಷಣದ ಬಗ್ಗೆ ಅರಿವು ಮೂಡಿಸಿದ್ದರು ಎಂದು ಶ್ಲಾಘಿಸಿದ ಆವರು, ಬಂಜಾರ ಸಮಾಜ ಬಾಂಧವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.


ಭದ್ರಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎ‌ನ್. ಕುಮಾರ್ ಮಾತನಾಡಿ,
ಸಂತ ಸೇವಲಾಲ್ ಮಹಾನ್ ದಾರ್ಶನಿಕರಾಗಿದ್ದರು. ಅವರ ಆದರ್ಶ ತತ್ವಗಳನ್ನು ನಾವೆಲ್ಲಾ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

 

ತಾಲ್ಲೂಕು ಪಂಚಾಯಿತಿ ಇಒ ನಾಗರಾಜ್, ತಾಲ್ಲೂಕು ಬಂಜಾರ ಸಮಾಜ ಅಧ್ಯಕ್ಷ ಕುಮಾರನಾಯ್ಕ ಮರಡಿ ತಾಂಡ, ಮಹಮಠ ಸಮಿತಿ ನಿರ್ದೇಶಕ ವಿಜಯನಾಯ್ಕ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಂಗಾರಿನಾಯ್ಕ, ಮುಖಂಡ ಬಸವರಾಜನಾಯ್ಕ, ವಿವಿಧ ಇಲಾಖೆ ಅಧಿಕಾರಿಗಳು, ವಿವಿಧ ಗ್ರಾಮಗಳ ಬಂಜಾರ ಸಮಾಜದ ಮುಖಂಡರು ಉಪಸ್ಥಿತರಿದ್ದರು.

 

Share

Leave a comment

Leave a Reply

Your email address will not be published. Required fields are marked *

Related Articles
Homeಪ್ರಮುಖ ಸುದ್ದಿ

ಆರ್ ಸಿಬಿ(RCB) ಗೆಲುವು ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಶಿಕಾರಿಪುರ ಲೈವ್: ಐಪಿಎಲ್ ಪಂದ್ಯಾವಳಿಯಲ್ಲಿ “ಆರ್‌ಸಿಬಿ” ತಂಡ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆ ಶಿಕಾರಿಪುರ ಪಟ್ಟಣದಲ್ಲಿ...

ಪ್ರಮುಖ ಸುದ್ದಿ

ಆಪರೇಷನ್ ಸಿಂಧೂರ ಬಗ್ಗೆ ಕಾಂಗ್ರೆಸ್ ಮುಖಂಡರು ಟೀಕೆ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ: ಸಂಸದ ಬಿ.ವೈ.‌ರಾಘವೇಂದ್ರ

ಶಿಕಾರಿಪುರ ಲೈವ್ : ಆಪರೇಷನ್ ಸಿಂಧೂರದ ಬಗ್ಗೆ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಅನಗತ್ಯವಾಗಿ ಟೀಕೆ ಮಾಡುತ್ತಿರುವುದು...

ಪ್ರಮುಖ ಸುದ್ದಿ

ಶಿಕಾರಿಪುರ: ಪುರಸಭೆ 39.17ಲಕ್ಷ ಉಳಿತಾಯ ಬಜೆಟ್‌ ಮಂಡನೆ

ಶಿಕಾರಿಪುರ ಲೈವ್: ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ನಡೆದ 2025–26ನೇ ಸಾಲಿನ ಬಜೆಟ್‌ ಸಭೆಯಲ್ಲಿ 39.17ಲಕ್ಷ...

Homeಪ್ರಮುಖ ಸುದ್ದಿ

ಪುರಸಭೆ ಅಧ್ಯಕ್ಷರಾಗಿ ಬಿಜೆಪಿ ಸದಸ್ಯೆ ಸುನಂದಾ ಮಂಜುನಾಥ್ ಅವಿರೋಧ ಆಯ್ಕೆ

ಶಿಕಾರಿಪುರ ಲೈವ್: ಪಟ್ಟಣದ ಪುರಸಭೆ ನೂತನ ಅಧ್ಯಕ್ಷರಾಗಿ ಬಿಜೆಪಿ ಸುನಂದಾ ಮಂಜುನಾಥ್ ಬಾಳೆಕಾಯಿ ಅವರು ಶುಕ್ರವಾರ...