ಶಿಕಾರಿಪುರ ಲೈವ್.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತದಿಂದ ಗೆಲುವು ಸಾಧಿಸಿದ ಹಿನ್ನೆಲೆ ಶಿಕಾರಿಪುರ ಪಟ್ಟಣದ ಬಿಜೆಪಿ ಕಚೇರಿ ಮುಂಭಾಗ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಹಾಗೂ ಸಿಹಿಹಂಚಿ ಸಂಭ್ರಮಿಸಿ ವಿಜಯೋತ್ಸವ ಆಚರಿಸಿದರು. ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ಮುಖಂಡರಾದ ಅಂಬಾರಗೊಪ್ಪ ಶೇಖರಪ್ಪ, ಕೆ.ಜಿ. ವಸಂತಗೌಡ್ರು, ದೂದಿಹಳ್ಳಿ ಬಸವರಾಜ್, ಮಲ್ಲೇಶಪ್ಪ ಸಿದ್ರಾಮಪ್ಪ, ವೀರೇಶ್, ಜಕ್ಕಿನಕೊಪ್ಪ ಗುರುರಾಜ್, ಹೊಸೂರು ರುದ್ರೇಶ್, ನಿಂಬೆಗೊಂದಿ ಸುರೇಶ್, ಹಳ್ಳೆಣ್ಣೆ ಗಿರೀಶ್, ಸುರೇಶ್, ನಿರಂಜನ ಗೌಡ್ರು, ಬೆಣ್ಣೆ ಪ್ರವೀಣ್, ವೀರನಗೌಡ, ಲೋಹಿತ್ ನಾಯ್ಕ, ನಂಜುಂಡಿ,ರಾಜು, ದೇವರಾಜ್ ಮತ್ತಿತರರು ಇದ್ದರು.
Leave a comment