ಶಿಕಾರಿಪುರ ಲೈವ್:
ತಾಲ್ಲೂಕಿನ ಈಸೂರು ಗ್ರಾಮದಿಂದ ಅಂಜನಾಪುರ ಕೆಇಬಿ ಗ್ರೀಡ್ ವರೆಗೆ ಅವೈಜ್ಞಾನಿಕ ನೀಲನಕ್ಷೆಯ ವಿದ್ಯುತ್ ಮಾರ್ಗ ನಿರ್ಮಾಣದ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಶಿವಮೊಗ್ಗ ಹಾಗೂ ಶಿಕಾರಿಪುರ ತಾಲ್ಲೂಕು ಘಟಕದ ನೇತೃತ್ವದಲ್ಲಿ ಚಿಕ್ಕಜೋಗಿಹಳ್ಳಿ,ಈಸೂರು ಹಾಗೂ ಚುರ್ಚಿಗುಂಡಿ,ಕೊರಲಹಳ್ಳಿ ಗ್ರಾಮದ ರೈತರು ತಾಲ್ಲೂಕು ಕಚೇರಿ ಮುಂಭಾಗ ಸೋಮವಾರ ಪ್ರತಿಭಟನಾ ಧರಣಿ ನಡೆಸಿದರು.
ಪ್ರತಿಭಟನಾ ಸಂದರ್ಭದಲ್ಲಿ ಮಾತನಾಡಿದ ಮಲೆನಾಡು ರೈತ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ತೀ.ನಾ. ಶ್ರೀನಿವಾಸ್, ಈಸೂರಿನಿಂದ ಅಂಜನಾಪುರ ಕೆಇಬಿ ಗ್ರೀಡ್ ವರೆಗೆ ವಿದ್ಯುತ್ ಮಾರ್ಗದ ನಿರ್ಮಾಣ ಮಾಡಲು ಮುಂದಾಗಿರುವುದು ಅವೈಜ್ಞಾನಿಕವಾಗಿದೆ. ಕೇವಲ 4ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಬಹುದಾದ ವಿದ್ಯುತ್ ಮಾರ್ಗವನ್ನು13 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕೊಂಡೊಯ್ಯದು ಕಾಮಗಾರ ಮುಂದಾಗಿರುವುದು ಅವೈಜ್ಞಾನಿಕವಾಗಿದೆ ಎಂದು ಆಅರೋಪಿಸಿದ ಆವರು,
ಈ ವಿದ್ಯುತ್ ಮಾರ್ಗ ನಿರ್ಮಾಣದಿಂದ ಅಡಿಕೆ ಬೆಳೆ ಸೇರಿದಂತೆ ಹಲವು ಬೆಳೆಗಳನ್ನು ಬೆಳೆದ ರೈತರ ಭೂಮಿಗೆ ತೊಂದರೆಯಾಗಲಿದೆ. ವಿದ್ಯುತ್ ಇಲಾಖೆ ಅಧಿಕಾರಿಗಳು ರೈತರೊಂದಿಗೆ ಯಾವುದೇ ಚರ್ಚೆ ನಡೆಸದೆ ಕಾಮಗಾರಿ ನಡೆಸಲು ಟೆಂಡರ್ ಪ್ರಕ್ರಿಯೆ ನಡೆಸಿರುವದು ಮುಂದಾಗಿರುವುದು ಖಂಡನೀಯವಾಗಿದೆ ಎಂದು ಆರೋಪಿಸಿದರು.
ಸ್ಥಳೀಯ ಶಾಸಕರಾದ ವಿಜಯೇಂದ್ರ ಹಾಗೂ ಸಂಸದ ರಾಘವೇಂದ್ರ ಅವರು ಈ ವಿದ್ಯುತ್ ಮಾರ್ಗ ನಿರ್ಮಾಣ ಮಾಡಬಾರದು ಎಂದು ಅಧಿಕಾರಿಗಳಿಗೆ ಸಲಹೆ ನೀಡಬೇಕು. ರೈತರ ಭೂಮಿಗೆ ತೊಂದರೆಯಾಗದಂತೆ ವಿದ್ಯುತ್ ಮಾರ್ಗ ನಿರ್ಮಾಣ ಮಾಡಲು ಆದಿಕಾರಿಗಳಿಗೆ ತಿಳಿಸಬೇಕು. ರೈತರು ದೇಶದ ಬೆನ್ನೆಲುಬು ಹಾಗೂ ಅನ್ನದಾತ ಎಂದು ಹೇಳುತ್ತಾರೆ. ಆದರೆ ಕೇಂದ್ರ ಹಾಗೂ ರಾಜ್ಯಸರ್ಕಾರಗಳು ರೈತರ ಅದಾಯ ದುಪ್ಪಟು ಮಾಡುವ ಕೆಲಸ ಮಾಡಿಲ್ಲ. ರಾಜ್ಯದಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಅಧಿಕಾರಕ್ಕಾಗಿ ಪರಸ್ಪರ ಅರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದು ರೈತರ ಪರ ಚಿಂತನೆ ನಡೆಸುತ್ತಿಲ್ಲ ಎಂದು ಆರೋಪಿಸಿದರು.
ಆತ್ಮಹತ್ಯೆಗೆ ಯತ್ನಿಸಿದ ರೈತ:
ಪ್ರತಿಭಟನಾ ಧರಣಿ ನಡೆಯುವ ಸಂದರ್ಭದಲ್ಲಿ ಚಿಕ್ಕಜೋಗಿಹಳ್ಳಿ ಗ್ರಾಮದ ರೈತ ಸುಭಾಷ್ ಚಂದ್ರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದಾಗ ಈ ಸಂದರ್ಭದಲ್ಲಿ ರೈತರು ಹಾಗೂ ಪೊಲೀಸರು ಅವರನ್ನು ತಡೆದರು.
ಪ್ರತಿಭಟನಾ ಸ್ಥಳಕ್ಕೆ ಶಾಸಕ ಬಿ.ವೈ. ವಿಜಯೇಂದ್ರ ಭೇಟಿ:
ಪ್ರತಿಭಟನಾ ನಡೆಯುವ ಸ್ಥಳಕ್ಕೆ ಶಾಸಕ ಬಿ.ವೈ. ವಿಜಯೇಂದ್ರ ಹಾಗೂ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ
ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದರು. ವಿದ್ಯುತ್ ಮಾರ್ಗ ನಿರ್ಮಾಣದಿಂದ ತಮ್ಮ ಭೂಮಿಗೆ ಆಗುವ ತೊಂದರೆಯನ್ನು ರೈತರು ಶಾಸಕರಿಗೆ ರೈತರು ಮಾಹಿತಿ ನೀಡಿದರು
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಿ.ವೈ.
ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ತಾಲ್ಲೂಕಿನ ರೈತರ ಪರ ಯೋಜನೆ ನೀಡಿದ್ದಾರೆ. ಹಿರೇಕೆರೂರು ತಾಲ್ಲೂಕಿನ ರೈತರ ಭೂಮಿ ಮೂಲಕ ನಮ್ಮ ತಾಲ್ಲೂಕಿನ ರೈತರಿಗೆ ನೀರಾವರಿ ಯೋಜನೆ ತಂದಿದ್ದಾರೆ. ಈ ವಿದ್ಯುತ್ ಮಾರ್ಗ ಕೂಡ ರೈತರ ಪರವಾಗಿರುತ್ತದೆ. ಆದರೆ ರೈತರ ಭೂಮಿಗೆ ತೊಂದರೆಯಾಗದಂತೆ ಯೋಜನೆ ಜಾರಿಗೊಳಿಸಲು ಜಿಲ್ಲಾಧಿಕಾರಿಗೆ ಸೂಚಿಸುತ್ತೇನೆ. ವಿದ್ಯುತ್ ಮಾರ್ಗ ಹೋಗುವ ರೈತರ ಭೂಮಿಗೆ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಬೇಕು ಎಂದು ಸ್ಥಳದಲ್ಲಿದ್ದ
ತಹಶೀಲ್ದಾರ್ ಮಲ್ಲೇಶ್ ಬಿ.ಪೂಜಾರ್ ಆವರಿಗೆ ಸೂಚಿಸಿದರು.
ರೈತ ಮುಖಂಡರಾದ ದಿನೇಶ್ ಸಿರಿವಾಳ, ಮಾಜಿ ಸೈನಿಕ ರವಿ, ಬೇಗೂರು ಶಿವಪ್ಪ, ಪ್ಯಾಟೆ ಈರಪ್ಪ, ಈಸೂರು ಸಂತೋಷ್, ರಾಜಶೇಖರ್, ಸುಭಾಸ್, ಧನಂಜಯ್, ವೀರಬಸಪ್ಪ. ಚಿಕ್ಕಜೋಗಿಹಳ್ಳಿ, ಈಸೂರು ಹಾಗೂ ಚುರ್ಚಿಗುಂಡಿ, ಕೊರಲಹಳ್ಳಿ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಭಟನಾ ಧರಣಿಗೂ ಮುನ್ನ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರೈತರು ಪ್ರತಿಭಟನಾ ಮೆರವಣಿಗೆ ನಡೆಸಿದರು
Leave a comment