ಶಿಕಾರಿಪುರ ಲೈವ್:
ಹಿಂದೂ ಧರ್ಮ ಹಾಗೂ ಸನಾತನ ಸಂಸ್ಕೃತಿ ಬಗ್ಗೆ ಹಗುರವಾಗಿ ಮಾತನಾಡುವವರ ವಿರುದ್ಧ ಪ್ರತಿಭಟನೆ ನಡೆಸಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ತಾಲೂಕಿನ ಶ್ರೀಮಳೆ ಮಲ್ಲೇಶ್ವರಸ್ವಾಮಿ ಜಾಗೃತ ಸ್ಥಳ ಕಡೇನಂದಿಹಳ್ಳಿ ತಪೋಕ್ಷೇತ್ರದಲ್ಲಿ ಶುಕ್ರವಾರ ನಡೆದ ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಪರಂಪರೆ ಜಾತ್ರೋತ್ಸವ, ಶ್ರೀ ರಂಭಾಪುರಿ ಜಗದ್ಗುರು ರೇವಣಸಿದ್ಧೇಶ್ವರ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ, ಬೃಹಸ್ಪತಿ ಹೋಮ, ಸ್ವಯಂವರ ಪಾರ್ವತಿ ಯಾಗ ಹಾಗೂ ಧರ್ಮ ಜಾಗೃತಿ ಸಮಾರಂಭವನ್ನು ಉದ್ಘಾಟಿಸಿ ಆವರು ಮಾತನಾಡಿದರು.
ಇತರೆ ಧರ್ಮದ ಜನರ ಓಲೈಕೆಗಾಗಿ ಹಿಂದೂ ಧರ್ಮ ಹಾಗೂ ಸನಾತನ ಸಂಸ್ಕೃತಿಯನ್ನು ಟೀಕಿಸುವವರು ನಮ್ಮ ಮಧ್ಯೆ ಇದ್ದಾರೆ. ಹಿಂದೂ ಧರ್ಮವನ್ನು ಟೀಕಿಸುವವರ ವಿರುದ್ಧ ನಾವು ಜಾಗರೂಕರಾಗಿರಬೇಕು. ನಾವು ದೇವರೆಂದು ಪೂಜಿಸುವ ಗೋಮಾತೆಯ ಕೆಚ್ಚಲನ್ನೇ ಕೊಯ್ಯುವಂತಹ ದುಷ್ಟ ಮನಸ್ಸುಗಳು ನಮ್ಮ ಮಧ್ಯೆ ಇದ್ದಾವೆ. ಗೋಮಾತೆಯನ್ನು ರಕ್ಷಿಸಲು ನಾವೆಲ್ಲಾ ಮುಂದಾಗಬೇಕು. ಮಠಮಾನ್ಯಗಳು ಹಾಗೂ ಸ್ವಾಮೀಜಿಗಳು ಹಿಂದೂ ಧರ್ಮವನ್ನು ರಕ್ಷಿಸಿ ಬೆಳೆಸುವ ಕಾರ್ಯ ಮಾಡುತ್ತಿದ್ದಾರೆ. ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ನೀಡಿದ ಮಾರ್ಗದರ್ಶನದಂತೆ ಈ ಮಠದ ರೇವಣಸಿದ್ದೇಶ್ವರ ಸ್ವಾಮೀಜಿ ನಿರಂತರವಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರು ದಶಧರ್ಮ ಸೂತ್ರಗಳನ್ನು ಬೋಧಿಸಿದ್ದು, ಪ್ರತಿಯೊಬ್ಬರಿಗೂ ಮಾನ್ಯವಾಗಿವೆ. ಮಠಗಳು ಸಂಸ್ಕಾರ ನೀಡುವ ಕೇಂದ್ರಗಳಾಗಿದ್ದು, ಸಮಾಜದಲ್ಲಿ ಸಾಮರಸ್ಯ, ಸೌಹಾರ್ದತೆ ಬೆಳೆಸುವ ಕಾರ್ಯ ಮಾಡುತ್ತಿವೆ. ವೀರಶೈವ ಧರ್ಮ ಮಾನವ ಧರ್ಮ ಎತ್ತಿ ಹಿಡಿದಿದೆ. ಇದರಲ್ಲಿರುವ ಧರ್ಮ ಚಿಂತನೆಗಳು ಎಲ್ಲರ ಉನ್ನತಿಗಾಗಿ ಇದ್ದಾವೆ. ಜೀವನದಲ್ಲಿ ಯಶಸ್ಸು ಗಳಿಸಲು ಕ್ರಿಯಾಶೀಲ ಆಲೋಚನೆ ಮಾಡುವುದು ಮುಖ್ಯವಾಗಿದೆ ಎಂದು ಸಲಹೆ ನೀಡಿದರು.
ಗೌರಿಗದ್ದೆ ಅವದೂತ ವಿನಯ್ ಗುರೂಜಿ ಮಾತನಾಡಿದರು.
ಕಡೇನಂದಿಹಳ್ಳಿ ಕಡೇನಂದಿಹಳ್ಳಿ ತಪೋಕ್ಷೇತ್ರದ
ಶ್ರೀ ರೇವಣಸಿದ್ದೇಶ್ವರ ಸ್ವಾಮಿಜಿ ನೇತೃತ್ವ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಶ್ರೀ.ಗುರು ರೇವಣಸಿದ್ದೇಶ್ಚರ ರಾಷ್ಟ್ತೀಯ ಪ್ರಶಸ್ತಿಯನ್ನು ಲೋಕೋಪಯೋಗಿ ಪ್ರಥಮ ದರ್ಜೆ ಗುತ್ತಿಗೆದಾರ ಪಿ.ಎಸ್. ದೇವೇಂದ್ರಪ್ಪ ಅವರಿಗೆ ಪ್ರಧಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಚನ್ನಗಿರಿ ಡಾ. ಕೇದಾರಲಿಂಗ ಶ್ರೀಗಳು, ಜಕ್ಕಲಿ-ಹಾರನಹಳ್ಳಿ ವಿಶ್ವಾರಾಧ್ಯ ಶ್ರೀಗಳು, ಹಾರನಹಳ್ಳಿ ಶಿವಯೋಗಿ ಶ್ರೀಗಳು, ನಾಗವಂದದ ಶಿವಯೋಗಿ ಶಿವಾನಂದ ಶ್ರೀಗಳು, ನಂದೀಪುರದ ನಂದೀಶ್ವರ ಶ್ರೀಗಳು, ಗೋವಿನಕೋವಿ ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮಿ. ಲಿಂಗಸುಗೂರಿನ ಮಾತಾ ಮಾಣಿಕೇಶ್ವರಿ ಆಶ್ರಮದ ನಂದಿಕೇಶ್ವರಿ ಅಮ್ಮ, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಆಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್, ತಾಲ್ಲೂಕು ಅಧ್ಯಕ್ಷ ಎ.ಬಿ. ಸುಧೀರ್, ತಾಲೂಕು ಜಂಗಮ ಸಮಾಜ ಅಧ್ಯಕ್ಷ ಪುಟ್ಟಸ್ವಾಮಿ, ಶಿರಾಳಕೊಪ್ಪ ವೀರಶೈವ ಸಮಾಜ ಅಧ್ಯಕ್ಷ ಪ್ರಭುಸ್ವಾಮಿ ಆನಿಮಠ್, ಶ್ರಿ. ರಂಭಾಪುರಿ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ. ಎಚ್. ಬಾಳನಗೌಡ್ರು, ಕೊಣಂದೂರು ಕೆ.ಆರ್.ಪ್ರಕಾಶ್, ಶಿವಕುಮಾರ ತಿಪ್ಪಶೆಟ್ಟಿ, ಬಸವರಾಜಪ್ಪ ಚನ್ನಳ್ಳೇರ, ವೀರೇಶ ವಡಕಪ್ಪಳಿ, ಅವಿನಾಶ, ಪಾಲಾಕ್ಷಗೌಡ ಪಾಟೀಲ, ನಾಗರಾಜ ಹುಲ್ಲಿನಕೊಪ್ಪ, ಶ್ವೇತಾ ಕಡೇನಂದಿಹಳ್ಳಿ, ಸವಣೂರಿನ ಡಾ.ಗುರುಪಾದಯ್ಯ ಸಾಲಿಮಠ ಮತ್ತಿತರರು ಉಪಸ್ಥಿತರಿದ್ದರು.
Leave a comment