ಶಿಕಾರಿಪುರ ಲೈವ್:
ಮಡಿವಾಳ ಮಾಚಿದೇವ ಕಾಯಕ ತತ್ವ ಪ್ರತಿಪಾದಿಸಿದ್ದರು ಎಂದು ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಕೆ.ಎಚ್. ಪುಟ್ಟಪ್ಪ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಮಡಿವಾಳ ಸಮಾಜ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು
ಮಡಿವಾಳ ಮಾಚಿದೇವ ತಮ್ಮ ವಚನಗಳ ಮೂಲಕ ವೈಚಾರಿಕತೆಯ ಸಂದೇಶವನ್ನು ಸಮಾಜದ ಜನರಿಗಾಗಿ ಸಾರಿದ್ದರು. ಪ್ರತಿಯೊಂದು ಕಾಯಕಕ್ಕೂ ಶ್ರೇಷ್ಠತೆ ಇದ್ದು,ಯಾವುದೇ ಕಾಯಕವನ್ನು ಮಾಡುವ ಬಗ್ಗೆ ಕೀಳರಿಮೆ ಹೊಂದಬಾರದು ಎಂದಿದ್ದರು. ೧೨ನೇ ಶತಮಾನದಲ್ಲಿ ಬಸವಾಧಿಶರಣರು ವಚನ ಸಾಹಿತ್ಯದ ಮೂಲಕ ನೀಡಿದ ಸಂದೇಶಗಳನ್ನು ಎಲ್ಲರೂ ಓದಿ ಅರ್ಥೈಸಿಕೊಳ್ಳಬೇಕು. ಶರಣರು ಯಾವುದೇ ಮಹಾರಾಜರಿಗೆ ಕಡಿಮೆ ಇರಲಿಲ್ಲ. ಸಮಸಮಾಜ ನಿರ್ಮಾಣಕ್ಕೆ ಪೂರಕವಾದ ಸಂದೇಶವನ್ನು ನೀಡಿದ್ದರು ಎಂದರು.
ಪುರಸಭೆ ಅಧ್ಯಕ್ಷೆ ಶೈಲಾ ಮಡ್ಡಿ ಯೋಗೀಶ್, ಗ್ರೇಡ್ 2 ತಹಶೀಲ್ದಾರ್ ರವಿಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನಾಗರಾಜ್, ತಾಲ್ಲೂಕು ಮಡಿವಾಳ ಸಮಾಜ ಅಧ್ಯಕ್ಷ ಎಚ್.ಎನ್. ಲೋಕಪ್ಪ, ಉಪಾಧ್ಯಕ್ಷರಾದ ವಕೀಲ ಕೋಡಪ್ಪ, ಭೀಮಪ್ಪ ಕಾರ್ಯದರ್ಶಿ ಶಾಂತವೀರಪ್ಪ, ಮುಖಂಡರಾದ ಬನ್ನೂರು ಮಂಜಪ್ಪ, ಮಧು ಹೋತನಕಟ್ಟೆ, ಸಾಲೂರು ಭಾಸ್ಕರ್ ಮತ್ತಿತರರು ಉಪಸ್ಥಿತರಿದ್ದರು.
Leave a comment