Home ನಮ್ಮೂರ ವಿಶೇಷ ಶಿಕಾರಿಪುರ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವಕ್ಕೆ ತೆರೆ
ನಮ್ಮೂರ ವಿಶೇಷ

ಶಿಕಾರಿಪುರ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವಕ್ಕೆ ತೆರೆ

Share
Share

ಶಿಕಾರಿಪುರ ಲೈವ್: ಜ.21ರಿಂದ ಆರಂಭವಾಗಿ ವಿಜೃಂಭಣೆಯಿಂದ ನಡೆದ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವಕ್ಕೆ ಜ.27ರಂದು ಸೋಮವಾರ ತೆರೆ ಬಿದ್ದಿತು.

ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವಕ್ಕೆ ತೆರೆ ಬಿಳುವ ಹಿನ್ನೆಲೆ ಮಾರಿಕಾಂಬಾ ದೇವಿ ಮೂರ್ತಿಯನ್ನು‌ ವಿವಿಧ ವಾದ್ಯ ಹಾಗೂ ಜೋಗಯ್ಯನವರ ಗಾಯನದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ಮಾರಿಕಾಂಬಾ ದೇವಿ ಮೂರ್ತಿಯನ್ನು ಪಟ್ಟಣದ ಗಡಿಭಾಗಕ್ಕೆ ಮೆರವಣಿಗೆ ಮೂಲಕ‌ ಕೊಂಡೊಯ್ದು ಧಾರ್ಮಿಕ ಕಾರ್ಯಗಳನ್ನು ನಡೆಲಾಯಿತು. ಜಾತ್ರಾ ಮಹೋತ್ಸವ ಪ್ರಯುಕ್ತ ಮೂರು ದಿನಗಳ ಕಾಲ ನಡೆದ ಕುಸ್ತಿ ಪಂದ್ಯಾವಳಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರನ್ನು ಆಕರ್ಷಿಸಿದವು. ಅಮ್ಯೂಸ್ ಮೆಂಟ್ ಪಾರ್ಕ್ ಮಕ್ಕಳು ಆಟವಾಡಿ ಸಂಭ್ರಮಿಸಿದರು.

ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ತೆರೆ ಬೀಳುವ ಮುನ್ನ ನಡೆದ ದೇವಿ ಮೆರವಣಿಗೆ ಸಂದರ್ಭದಲ್ಲಿ ಮಾತನಾಡಿದ ಮಾರಿಕಾಂಬಾ ಜಾತ್ರಾ ಮಹೋತ್ಸವ ಸಮಿತಿ ಹಾಗೂ ದೇವಸ್ಥಾ‌ನ ಸಮಿತಿ ಅಧ್ಯಕ್ಷ ಗೋಣಿ ಪ್ರಕಾಶ್, ಮೂರು ವರ್ಷಕ್ಕೊಮ್ಮೆ ನಡೆಯುವ ಈ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಸಂಭ್ರಮ ಹಾಗೂ ವಿಜೃಂಭಣೆಯಿಂದ ನಡೆದಿದೆ. ಜಾತ್ರಾ ಮಹೋತ್ಸವ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ಹಾಗೂ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಪಟ್ಟಣದ ಎಲ್ಲಾ ಜಾತಿ,ಧರ್ಮಗಳ ಬಾಂಧವರು, ಭಕ್ತರು,ವರ್ತಕರಿಗೆ, ಪೊಲೀಸ್ ಅಧಿಕಾರಿಗಳಿಗೆ, ವಿವಿಧ ಇಲಾಖೆ ಆಧಿಕಾರಿಗಳಿಗೆ, ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಸಮಿತಿ ಪದಾಧಿಕಾರಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

Share

Leave a comment

Leave a Reply

Your email address will not be published. Required fields are marked *

Related Articles
MP B.Y. Raghavendra inaugurated the Geethotsava program.
ನಮ್ಮೂರ ವಿಶೇಷ

ಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಬಿ.ವೈ. ರಾಘವೇಂದ್ರ

ಶಿಕಾರಿಪುರ ಲೈವ್: ವಿಜ್ಞಾನ ಎಷ್ಟೇ ಮುಂದುವರಿದರೂ ಸನಾತನ ಸಂಸ್ಕೃತಿಯನ್ನು ಮರೆಯಲು ಸಾಧ್ಯವಿಲ್ಲ ಎಂದು ಸಂಸದ ಬಿ.ವೈ....